ಬಿಗ್ ಬ್ಯಾಷ್ ಲೀಗ್‌ನಿಂದ ಡಿವಿಲಿಯರ್ಸ್ ದೂರ

Update: 2020-10-27 18:41 GMT

ದುಬೈ, ಅ.27: ಕೋವಿಡ್-19 ಸಾಂಕ್ರಾಮಿಕ ಸೋಂಕು ಭಯ ಮತ್ತು ಅವರ ಮೂರನೇ ಮಗುವಿನ ತಂದೆಯಾಗುವ ನಿರೀಕ್ಷೆಯಲ್ಲಿರುವ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಈ ವರ್ಷ ಬಿಗ್ ಬ್ಯಾಷ್ ಲೀಗ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಭವಿಷ್ಯದಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಪರ ಆಡುವುದಾಗಿ ಹೇಳಿದ್ದಾರೆ.

 ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ 36ರ ಹರೆಯದ ಎಬಿಡಿ ಇದೀಗ ಯುಎಇಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದಾರೆ.

 ಕಳೆದ ಋತುವಿನಲ್ಲಿ ಹೀಟ್ ಅದ್ಭುತ ಅನುಭವ ನೀಡಿದೆ. ಭವಿಷ್ಯದಲ್ಲಿ ನಾನು ಕ್ಲಬ್‌ಗೆ ಮರಳಲು ಮುಕ್ತನಾಗಿದ್ದೇನೆ ಎಂದರು.

  ಡಿವಿಲಿಯರ್ಸ್ ಕಳೆದ ಋತುವಿನಲ್ಲಿ ಬಿಬಿಎಲ್ ಫ್ರಾಂಚೈಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. 24.33 ಸರಾಸರಿಯಲ್ಲಿ 146 ರನ್ ಗಳಿಸಿದ್ದರು. ಐಪಿಎಲ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಎಬಿಡಿ ಸರಾಸರಿ 54 ಸರಾಸರಿಯಂತೆ 324 ರನ್ ಗಳಿಸಿದ್ದಾರೆ.

 ಮುಂಬರುವ ಋತುವಿನಲ್ಲಿ ಡಿವಿಲಿಯರ್ಸ್ ಸೇವೆಯನ್ನು ಪಡೆಯಲು ತಂಡವು ಉತ್ಸುಕವಾಗಿದೆ ಎಂದು ಬ್ರಿಸ್ಬೇನ್ ಹೀಟ್ಸ್ ಮುಖ್ಯ ಕೋಚ್ ಹೇಳಿದ್ದಾರೆ. ಬಿಗ್ ಬ್ಯಾಷ್ ಲೀಗ್ ಡಿಸೆಂಬರ್ 3 ರಂದು ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News