ಮನಸ್ತಾಪ ಹುಟ್ಟುಹಾಕುವುದನ್ನು ನಿಲ್ಲಿಸಿ: ಅಮೆರಿಕ ವಿದೇಶ ಕಾರ್ಯದರ್ಶಿಗೆ ಚೀನಾ ಒತ್ತಾಯ

Update: 2020-10-27 18:45 GMT

ಬೀಜಿಂಗ್ (ಚೀನಾ), ಅ. 27: ಚೀನಾ ಮತ್ತು ವಲಯದ ಇತರ ದೇಶಗಳ ನಡುವೆ ಮನಸ್ತಾಪ ಹುಟ್ಟುಹಾಕುವ ಕೆಲಸವನ್ನು ನಿಲ್ಲಿಸಿ ಎಂದು ಚೀನಾ ಮಂಗಳವಾರ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊರನ್ನು ಒತ್ತಾಯಿಸಿದೆ.

ಅಮೆರಿಕದ ಈ ಪ್ರಯತ್ನಗಳು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆಯಾಗಿದೆ ಎಂದು ಅದು ಹೇಳಿದೆ.

ಭಾರತ-ಅಮೆರಿಕ ರಕ್ಷಣಾ ಸಹಕಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಾತುಕತೆಗಳನ್ನು ನಡೆಸಲು ಪಾಂಪಿಯೊ ಭಾರತಕ್ಕೆ ನೀಡಿರುವ ಭೇಟಿಯ ಸಂದರ್ಭದಲ್ಲಿ ಚೀನಾ ಈ ಹೇಳಿಕೆ ನೀಡಿದೆ.

ಮೂರನೇ ಭಾರತ-ಅಮೆರಿಕ 2+2 ಮಾತುಕತೆಯನ್ನು ನಡೆಸುವುದಕ್ಕಾಗಿ ಪಾಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಸೋಮವಾರ ಹೊಸದಿಲ್ಲಿಗೆ ಬಂದಿದ್ದಾರೆ.

ಭಾರತ ಭೇಟಿಯ ಬಳಿಕ, ಪಾಂಪಿಯೊ, ಶ್ರೀಲಂಕಾ ಮತ್ತು ಮಾಲ್ದೀವ್ಸ್ ದೇಶಗಳಿಗೆ ಭೇಟಿ ನೀಡಲಿದ್ದಾರೆ.

ಚೀನಾದ ವಿರುದ್ಧ ಪಾಂಪಿಯೊ ನಡೆಸಿರುವ ವಾಗ್ದಾಳಿಗಳು ಮತ್ತು ಆರೋಪಗಳು ಹೊಸದೇನಲ್ಲ ಎಂದು ಬೀಜಿಂಗ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚೀನಾ ವಿದೇಶ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News