ಮಕ್ಕಾದ ಮಸ್ಜಿದುಲ್ ಹರಾಮ್ ಗೇಟ್ ಗೆ ನುಗ್ಗಿದ ಕಾರು; ಚಾಲಕನ ಬಂಧನ

Update: 2020-10-31 04:51 GMT

ರಿಯಾದ್: ಚಾಲಕನೊಬ್ಬ ಕಾರೊಂದನ್ನು ಮಕ್ಕಾದ ಮಸ್ಜಿದುಲ್ ಹರಾಮ್ ಮಸೀದಿಯ ಹೊರ ಪರಿಧಿಯ ಗೇಟ್ ಗೆ ನುಗ್ಗಿಸಿರುವ ಆಘಾತಕಾರಿ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಘಟನೆಯಿಂದ ಯಾವುದೇ ಸಾವು-ನೋವು ಉಂಟಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಪಘಾತದಲ್ಲಿ ಯಾವುದೇ ನಾಗರಿಕರು ಗಾಯಗೊಂಡಿಲ್ಲ ಎಂದು ಸೌದಿ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿರುವ ಇತರ ವೀಡಿಯೊಗಳಲ್ಲಿ ಹಲವು ಜನರು ವಾಹನವನ್ನು ಮಸೀದಿ ಸಂಕೀರ್ಣದಿಂದ ದೂರ ತಳ್ಳುವುದನ್ನು ತೋರಿಸುತ್ತಿದೆ. ಸೌದಿ ಪ್ರಜೆಯಾಗಿರುವ ಚಾಲಕನನ್ನು ಬಂಧಿಸಲಾಗಿದೆ. ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸೌದಿ ಪತ್ರಿಕೆ ವರದಿ ಮಾಡಿದೆ.

ಸೌದಿ ಅರೇಬಿಯದ ಸರಕಾರಿ ಚಾನಲ್ ಘಟನೆಯ ಸಮಯದಲ್ಲಿ ಹಾಗೂ ನಂತರ ಮಸೀದಿಯ ಒಳಗಿನಿಂದ ನೇರ ವೀಡಿಯೊ ಪ್ರಸಾರವನ್ನು ಮುಂದುವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News