ಫ್ರೆಂಚ್ ಬಾಕ್ಸಿಂಗ್ ಟೂರ್ನಿ: ಅಮಿತ್, ಸಂಜೀತ್‌ಗೆ ಸ್ವರ್ಣ ಸಂಭ್ರಮ

Update: 2020-10-31 09:54 GMT
ಅಮಿತ್ ಪಾಂಘಾಲ್

ಹೊಸದಿಲ್ಲಿ: ಕೊರೋನ ವೈರಸ್ ಬಲವಂತದ ವಿರಾಮದ ಬಳಿಕ ಮೊದಲ ಬಾರಿ ಫ್ರಾನ್ಸ್‌ನ ನಾಂಟೆಸ್ ನಲ್ಲಿ ನಡೆದ ಅಲೆಕ್ಸಿಸ್ ವ್ಯಾಸ್ಟೈನ್ ಅಂತರ್‌ರಾಷ್ಟ್ರೀಯ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಭಾರತದ ಬಾಕ್ಸರ್ ಅಮಿತ್ ಪಾಂಘಾಲ್(52 ಕೆಜಿ) ಹಾಗೂ ಸಂಜೀತ್ (91ಕೆಜಿ)ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು.

ಏಶ್ಯನ್ ಚಾಂಪಿಯನ್ ಆಗಿರುವ ಅಮಿತ್ ಶುಕ್ರವಾರ ರಾತ್ರಿ ನಡೆದ ಫೈನಲ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಮೆರಿಕದ ರೆನ್ ಅಬ್ರಹಾಂ ರನ್ನು 3-0 ಅಂತರದಿಂದ ಮಣಿಸಿದರು. ಮತ್ತೊಂದು ಫೈನಲ್ ಸ್ಪರ್ಧೆಯಲ್ಲಿ ಮಾಜಿ ಇಂಡಿಯಾ ಓಪನ್ ಚಾಂಪಿಯನ್ ಸಂಜೀತ್ ಅವರು ಫ್ರಾನ್ಸ್‌ನ ಸೊಹೆಬ್‌ರನ್ನು ಸೋಲಿಸಿ ಸ್ವರ್ಣ ಪದಕಕ್ಕೆ ಮುತ್ತಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News