ಪ್ರತಿಕಾಯ ಚಿಕಿತ್ಸೆಯಿಂದ ಕೋವಿಡ್-19 ಸೋಂಕಿನ ತೀವ್ರತೆ ತಡೆಯಲು ಸಾಧ್ಯ : ಸಂಶೋಧನಾ ವರದಿ

Update: 2020-10-31 16:58 GMT

ಲಾಸ್ ಏಂಜಲೀಸ್,ಅ.31: ನೊವೆಲ್ ಪ್ರತಿಕಾಯಗಳನ್ನು ನೀಡಲಾದ ಕೋವಿಡ್-19 ರೋಗಿಗಳಲ್ಲಿ, ಅತ್ಯಂತ ಕಡಿಮೆ ಮಟ್ಟದ ಕೊರೋನ ಸೋಂಕಿನ ರೋಗಲಕ್ಷಣಗಳನ್ನು ಕಂಡುಬಂದಿವೆ ಹಾಗೂ ಅವರಿಗೆ ಆಸ್ಪತ್ರೆಗೆ ದಾಖಲಾಗುವ ಅಥವಾ ತುರ್ತು ವೈದ್ಯಕೀಯ ಶುಶ್ರೂಷೆಯ ಅವಶ್ಯಕತೆಯುಂಟಾಗಿರಲಿಲ್ಲವೆಂದು ನೂತನ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.

 ಗುಣಮುಖನಾದ ಕೋವಿಡ್-19 ರೋಗಿಯ ರಕ್ತದಿಂದ ಪಡೆಯಲಾದ ‘ಎಲ್‌ವೈ-ಸಿಓವಿ555 ಮೊನೊಕ್ಲೊನಾಲ್’ ಪ್ರತಿಕಾಯಗಳನ್ನು ಮೂರು ವಿಭಿನ್ನ ಡೋಸೇಜ್‌ಗಳಲ್ಲಿ ಕೊರೋನ ರೋಗಿಗಳಿಗೆ ನೀಡಲಾಗಿತ್ತು. ಸಣ್ಣ ಮಟ್ಟದಿಂದ ಹಿಡಿದು ಸಾಧಾರಣ ಮಟ್ಟದ ಕೊರೋನ ರೋಗಲಕ್ಷಣಗಳನ್ನು ಪ್ರದರ್ಶಿಸಿದ ರೋಗಿಗಳಿಗೆ 2800 ಮಿಲಿಗ್ರಾಂ. ಡೋಸೆಜ್‌ಗನ್ನು ನೀಡಲಾಗಿತ್ತು. ಈ ರೋಗಿಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವು ಅತ್ಯಂತ ಕಡಿಮೆ ಪ್ರಮಾಣದಲ್ಲಿತ್ತು ಹಾಗೂ ತುರ್ತು ವೈದ್ಯಕೀಯ ಶುಶ್ರೂಷೆಯ ಅಗತ್ಯ ಅವರಿಗುಂಟಾಗಿರಲಿಲ್ಲವೆಂದು ಅಧ್ಯಯನ ವರದಿ ತಿಳಿಸಿದೆ.

 ಈ ಪ್ರಯೋಗದ ಫಲಿತಾಂಶಗಳನ್ನು ನ್ಯೂ ಇಂಗ್ಲೆಂಡ್ ಜರ್ನಲ್ ಆಪ್ ಮೆಡಿಸಿನ್‌ನಲ್ಲಿ ಪ್ರಕಟಿಸಲಾಗಿದೆ.

ಮೊನೊಕ್ಲೊನಾಲ್ ಪ್ರತಿಕಾಯಗಳಿಗೆ ಹಲವಾರು ರೋಗಿಗಳಲ್ಲಿ ಕೋವಿಡ್-19 ರೋಗದ ತೀವ್ರತೆಯನ್ನು ಕಡಿಮೆಗೊಳಿಸುವ ಸಾಮರ್ಥ್ಯವಿದೆ ಹಾಗೂ ಹೆಚ್ಚಿನ ಸಂಖ್ಯೆಯ ರೋಗಿಗಳು ಮನೆಯಲ್ಲೇ ಚೇತರಿಸಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ’’ ಎಂದು ಅಧ್ಯಯನ ತಂಡದ ಸದಸ್ಯರಾ ಅಮೆರಿಕದ ಸೆಡಾರ್ಸ್‌-ಸಿನಾಯ್ ಮೆಡಿಕಲ್ ಸೆಂಟರ್‌ನ ಪೀಟರ್ ಚೆನ್ ತಿಳಿಸಿದ್ದಾರೆ.

 ಮೊನೊಕ್ಲೊನಾಲ್ ಪ್ರತಿಕಾಯಗಳು ವೈರಸ್‌ಗಳಿಗಾಗಿ ತಾವಾಗಿಯೇ ತಗಲಿಕೊಳ್ಳುವ ಮೂಲಕ ಅವು ಪ್ರತಿಸೃಷ್ಟಿಯಾಗುವುದನ್ನು ತಡೆಯುತ್ತವೆ ಎಂದು ಸಂಶೋಧನಾ ವರದಿ ಹೇಳಿದೆ.

2800 ಮಿಲಿ ಗ್ರಾಂ ಡೋಸೆಜ್ ಪಡೆದುಕೊಂಡ ಕೋವಿಡ್-19 ರೋಗಿಗಳಲ್ಲಿ 11ನೇ ದಿನದೊಳಗೆ ಕೊರೋನ ವೈರಸ್ ಪ್ರಮಾಣದಲ್ಲಿ ಗಣನೀಯ ಇಳಿಕೆಯುಂಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News