ಕನಕಪುರದಿಂದ ಬಂದವರು ಹಣ ಹಂಚಿದ್ದಾರೆ: ಮುನಿರತ್ನ ಆರೋಪ

Update: 2020-11-01 12:36 GMT

ಬೆಂಗಳೂರು, ನ. 1: ಕನಕಪುರದಿಂದ ಬಂದವರು ಆರ್.ಆರ್ ನಗರ ಕ್ಷೇತ್ರದಲ್ಲಿ ಹಣ ಹಂಚಿದ್ದಾರೆ. ಏಳು ಕಡೆ ಹಣ ಹಂಚಿ ಸಿಕ್ಕಿಬಿದ್ದಿದ್ದಾರೆ ಎಂದು ಆರ್.ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಆರೋಪಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಅಷ್ಟು ಪ್ರಾಮಾಣಿಕರು ಆಗಿದ್ದರೆ ಹಣ ಹಂಚುವ ಕೆಲಸ ಯಾಕೆ ಮಾಡಬೇಕಿತ್ತು. ಶನಿವಾರದಂದು ಹಣ ಹಂಚುತ್ತಿದ್ದವರ ವಿರುದ್ಧ ಏಳು ಎಫ್‍ಐಆರ್ ಗಳಾಗಿದೆ. ಕೆಲವರು ವಾಹನಗಳನ್ನು ಬಿಟ್ಟು ಓಡಿ ಹೋಗಿದ್ದಾರೆ. ಎಲ್ಲವೂ ತನಿಖೆ ಆಗುತ್ತಿದೆ. ಹಣ ಹಂಚುವದರಿಂದ ಏನೂ ಸಾಧನೆ ಆಗಲ್ಲ ಎಂದಿದ್ದಾರೆ.

ಕಾಂಗ್ರಸ್ ನವರ ಹಣಕ್ಕಾಗಿ ಯಾರೂ ಕಾಯುತ್ತಿಲ್ಲ. ಕ್ಷೇತ್ರದಲ್ಲಿ ಇರುವವರು ಶ್ರಮಿಕರು. ಅವರನ್ನು ಹಣದಿಂದ ಕೊಂಡುಕೊಳ್ಳಲು ಆಗಲ್ಲ. ನಾವು ಎಲ್ಲ ನೋಡುತ್ತಿದ್ದೇವೆ. ಹಣದಿಂದ ಜನರ ಮನಸಲ್ಲಿ ಸ್ಥಾನ ಹಿಡಿಯಕ್ಕಾಗಲ್ಲ. ಒಂದು ಮತಕ್ಕೆ 2, 3, 5 ಸಾವಿರ ರೂ.ಗಳವರೆಗೂ ಅವರು ಆಮಿಷ ಒಡ್ಡುತ್ತಿದ್ದಾರೆ. ಅವರಿಗೆ ದುಡ್ಡಿಗೇನೂ ಕಮ್ಮಿ ಇಲ್ಲ, ಕೊಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News