ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತ ಎಣಿಕೆ ಆರಂಭ: ತೀವ್ರ ಪೈಪೋಟಿ

Update: 2020-11-04 01:00 GMT

ವಾಷಿಂಗ್ಟನ್: ಇಡೀ ವಿಶ್ವ ಎದುರು ನೋಡುತ್ತಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಆದರೆ ಒಟ್ಟು ಮತ ಗಳಿಕೆಯಲ್ಲಿ ಬೈಡನ್ ಮುಂದಿದ್ದಾರೆ.

ಭಾರತೀಯ ಕಾಲಮಾನದ ಪ್ರಕಾರ ಮುಂಜಾನೆ 5.30ಕ್ಕೆ ಎಣಿಕೆ ಕಾರ್ಯ ಆರಂಭವಾಗಿದ್ದು, ಇತ್ತೀಚಿನ ವರದಿಗಳು ಬಂದಾಗ ಟ್ರಂಪ್ ಎಂಟು ಮತಗಳನ್ನು ಹಾಗೂ ಜೋ ಬೈಡನ್ ಮೂರು ಮತಗಳನ್ನು ಪಡೆದಿದ್ದಾರೆ. ಗೆಲ್ಲಲು 270 ಮತಗಳ ಅಗತ್ಯವಿದೆ. ಟ್ರಂಪ್ ಶೇಕಡ 49ರಷ್ಟು ಮತ ಪಡೆದಿದ್ದರೆ, ಬೈಡನ್ 50.2ರಷ್ಟು ಮತ ಪಡೆದಿದ್ದಾರೆ. ಟ್ರಂಪ್ ಪಡೆದ ಒಟ್ಟು ಮತಗಳ ಸಂಖ್ಯೆ 29,75,113 ಆಗಿದ್ದರೆ, ಬೈಡನ್ 30,48,886 ಮತ ಗಳಿಸಿದ್ದಾರೆ.

ಫ್ಲೋರಿಡಾದಲ್ಲಿ ಬೈಡನ್ ಅಲ್ಪ ಮುನ್ನಡೆ ಸಾಧಿಸಿದ್ದರೆ, ಜಾರ್ಜಿಯಾದಲ್ಲಿ ಭಾರಿ ಮುನ್ನಡೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News