ಅಧ್ಯಕ್ಷೀಯ ರೇಸ್: ಶ್ವೇತಭವನದ ಕದ ತಟ್ಟುತ್ತಿರುವ ಬೈಡನ್

Update: 2020-11-04 03:54 GMT

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ರೇಸ್ ಕ್ಷಣಕ್ಷಣಕ್ಕೂ ರೋಮಾಂಚನ ಮೂಡಿಸುತ್ತಿದ್ದು, ಇತ್ತೀಚಿನ ವರದಿಗಳು ಬಂದಾಗ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ಸ್ಪಷ್ಟ ಮುನ್ನಡೆ ಸಾಧಿಸಿದ್ದಾರೆ.

538 ಸ್ಥಾನಗಳ ಪೈಕಿ 369 ಸ್ಥಾನಗಳ ಮುನ್ನಡೆ ಲಭ್ಯವಿದ್ದು, ಜೋ ಬೈಡನ್ 215 ಹಾಗೂ ಡೊನಾಲ್ಡ್ ಟ್ರಂಪ್ 164 ಸ್ಥಾನಗಳಲ್ಲಿ ಮುನ್ನಡೆದಿದ್ದಾರೆ. ಸ್ಪಷ್ಟ ಬಹುಮತಕ್ಕೆ 270 ಸ್ಥಾನಗಳ ಅಗತ್ಯವಿದೆ. ಇದೇ ಮುನ್ನಡೆಯನ್ನು ಉಳಿಸಿಕೊಂಡಲ್ಲಿ ಬೈಡನ್ ಗೆ ಇನ್ನು 60 ಸ್ಥಾನಗಳ ಅಗತ್ಯ ಇದೆ.

ಕೊರೋನ ವೈರಸ್ ಸಾಂಕ್ರಾಮಿಕದ ನಡುವೆಯೇ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಂಗಳವಾರ 10 ಕೋಟಿಗೂ ಅಧಿಕ ಮತದಾರರು ಮತ ಚಲಾಯಿಸಿದ್ದರು. ಇದುವರೆಗೆ ಏಳು ರಾಜ್ಯಗಳಲ್ಲಿ ಬೈಡನ್ ಜಯ ಸಾಧಿಸಿದ್ದರೆ, ಟ್ರಂಪ್ ಐದು ರಾಜ್ಯಗಳಲ್ಲಿ ಗೆದ್ದಿದ್ದಾರೆ. ನಿರ್ಣಾಯಕ ಎನಿಸಿದ ಫ್ಲೋರಿಡಾ, ಜಾರ್ಜಿಯಾ ಮತ್ತು ಓಹಿಯೊದಲ್ಲಿ ತುರುಸಿನ ಸ್ಪರ್ಧೆ ಕಂಡುಬಂದಿದೆ.

ಶೇಕಡ 81ರಷ್ಟು ಮತನದಾನ ನಡೆದಿರುವ ಪ್ರಮುಖ ಕಣವಾದ ಫ್ಲೋರಿಡಾದಲ್ಲಿ ಉಭಯ ಅಭ್ಯರ್ಥಿಗಳು ಶೇಕಡ 49ರಷ್ಟು ಮತಗಳನ್ನು ಗಳಿಸಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ಟ್ರಂಪ್ ಪಶ್ಚಿಮ ವರ್ಜೀನಿಯಾ ಮತ್ತು ಫ್ಲೋರಿಡಾದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕೊಲೊರೋಡಾದಲ್ಲಿ  ಬೈಡನ್ ಗೆಲುವು ಸಾಧಿಸಿದ್ದಾರೆ.

ಅಲಂಬಾ (9), ಅರ್ಕಾನ್ಸಾಸ್ (6), ಇಂಡಿಯಾನಾ (11), ಕೆಂಟಕಿ (8), ಲೂಸಿಯಾನಾ (8), ಮಿಸಿಸಿಪ್ಪಿ (6), ಉತ್ತರ ಡಕೋಟಾ (3), ಒಕ್ಲಹೋಮಾ (7), ದಕ್ಷಿಣ ಡಕೋಟಾ (3), ಟೆನ್ನೀಸೀ (11), ಪಶ್ಚಿಮ ವರ್ಜೀನಿಯಾ (5) ಮತ್ತು ವ್ಯೋಮಿಂಗ್ (3) ರಾಜ್ಯಗಳಲ್ಲಿ ಟ್ರಂಪ್ ಗೆಲುವು ಸಾಧಿಸಿದ್ದಾರೆ.

 ಬೈಡನ್ ಗೆದ್ದಿರುವ ರಾಜ್ಯಗಳೆಂದರೆ ಕನೆಕ್ಟಿಕಟ್ (7), ಡೆಲವರ್ (3), ಇಲಿನೋಯಿಸ್ (20), ಮೆರಿಲ್ಯಾಂಡ್ (10), ಮೆಸೆಚುಸೆಟ್ಸ್ (11), ನ್ಯೂಜೆರ್ಸಿ (14), ನ್ಯೂಯಾರ್ಕ್ (29), ರೋಡ್ ದ್ವೀಪ (4), ವರ್ಮೊಂಟ್ (3) ಮತ್ತು ವರ್ಜೀನಿಯಾ (13).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News