ಡೆಮಾಕ್ರಟಿಕ್ ನಿಂದ ಚುನಾವಣೆಯನ್ನು ಕಸಿಯುವ ಪ್ರಯತ್ನ: ಟ್ರಂಪ್ ಆರೋಪ

Update: 2020-11-04 07:10 GMT

ನ್ಯೂಯಾರ್ಕ್: "ನಾವು ಭಾರೀ ಗೆಲುವು ಸಾಧಿಸಲಿದ್ದು, ಪ್ರತಿ ಸ್ಪರ್ಧಿ ಜೋ ಬೈಡರ್ ಅವರ ಡೆಮಾಕ್ರಟಿಕ್ ಪಕ್ಷ ಚುನಾವಣೆಯನ್ನು ಕಸಿಯುವ ಪ್ರಯತ್ನ ಮಾಡುತ್ತಿದೆ. ನಾವು ಹಾಗೆ ಮಾಡಲು ಬಿಡುವುದಿಲ್ಲ. ಚುನಾವಣೆಗಳು ಮುಗಿದ ಬಳಿಕ ಮತಗಳನ್ನು  ಹಾಕುವಂತಿಲ್ಲ. ನಾನು ಇಂದು ರಾತ್ರಿ ಭರ್ಜರಿ ಗೆಲುವಿನ ಕುರಿತು ಹೇಳಿಕೆ ನೀಡುವೆ'' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಹಾಗೂ ಬೈಡನ್ ನಡುವೆ ತೀವ್ರ ಪೈಪೋಟಿ ಕಂಡು ಬಂದಿದೆ. ಟ್ರಂಪ್ ಈ ತನಕ 21 ರಾಜ್ಯಗಳಲ್ಲಿ ಜಯ ಸಾಧಿಸಿದ್ದರೆ, ಬೈಡನ್ 19 ರಾಜ್ಯಗಳಲ್ಲಿ ಜಯ ಸಾಧಿಸಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಅತ್ಯಂತ ಮುಖ್ಯವಾಗಿರುವ ಫ್ಲೋರಿಡಾ ಹಾಗೂ ಒಹಿಯೊದಲ್ಲಿ ಟ್ರಂಪ್ ಕಡಿಮೆ ಅಂತರದಿಂದ ಜಯ ಸಾಧಿಸಿದ್ದಾರೆ ಎಂದು ವರದಿಯಾಗಿದೆ. ಬೈಡನ್ ಟ್ವೀಟಿಸಿದ ಬೆನ್ನಿಗೇ ಟ್ರಂಪ್ ಟ್ವೀಟ್ ಮಾಡಿದ್ದಾರೆ.

"ಮತ ಎಣಿಕೆ ನಡೆಯುತ್ತಿರುವ ಕಾರಣ ನಂಬಿಕೆಯನ್ನು ಕಳೆದುಕೊಳ್ಳಬೇಡಿ. ಎಲ್ಲರೂ ತಾಳ್ಮೆ ಯಿಂದ ಇರಬೇಕು. ಫಲಿತಾಂಶಕ್ಕೆ ಕಾದುನೋಡಬೇಕು.  ಮತ ಎಣಿಕೆ ಸುದೀರ್ಘವಾಗಿ ನಡೆಯಬಹುದು. ನಾವು ಈ ಚುನಾವಣೆಯನ್ನು ಗೆಲ್ಲುತ್ತೇವೆ' ಎಂದು ಬೈಡನ್ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದರು.

ಟ್ರಂಪ್ ಗೆ ಟ್ವಿಟ್ಟರ್ ಎಚ್ಚರಿಕೆ

ಚುನಾವಣೆಯನ್ನು ಕಸಿಯುವ ಪ್ರಯತ್ನ ಎಂದು ಆರೋಪಿಸಿರುವ ಟ್ರಂಪ್ ಅವರ ಟ್ವೀಟನ್ನು ಟ್ವಿಟರ್ ಮರೆ ಮಾಚಿದೆ.  ಈ ವಿಷಯವು ವಿವಾದಾತ್ಮಕವಾಗಿದೆ ಹಾಗೂ ಇದು ತಪ್ಪು ಮಾಹಿತಿ ಯಿಂದ ಕೂಡಿದ್ದು, ತಪ್ಪುದಾರಿಗೆಳೆಯುವಂತಿದೆ ಎಂದು ಟ್ವಿಟ್ಟರ್, ಟ್ರಂಪ್ ಗೆ ಎಚ್ಚರಿಕೆ ನೀಡಿರುವುದಾಗಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News