ರಾಜಧಾನಿಯಲ್ಲಿ ಪಟಾಕಿ ಬ್ಯಾನ್ ಮಾಡಿದರೆ ಒಳ್ಳೆಯದು: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

Update: 2020-11-05 12:47 GMT

ಬೆಂಗಳೂರು, ನ.5: ವಾಯು ಮಾಲಿನ್ಯದಿಂದ ನಗರವನ್ನು ಕಾಪಾಡಲು ಪಟಾಕಿ ಬ್ಯಾನ್ ಮಾಡಿದರೆ ಒಳ್ಳೆಯದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ದೀಪಾವಳಿ ಹಬ್ಬದಲ್ಲಿ ಪಟಾಕಿ ಬ್ಯಾನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರಕಾರದ ನಿರ್ಧಾರಕ್ಕೆ ನಾವು ಬದ್ಧ. ಪಾಲಿಕೆ ನಿರ್ಧಾರದ ಪ್ರಕಾರ ಮಾಲಿನ್ಯ ನಿಯಂತ್ರಣ ಮಾಡುವುದು ದೊಡ್ಡ ಸವಾಲಾಗಿದೆ. ಒಂದು ಕಡೆ ಮಾಲಿನ್ಯ, ಮತ್ತೊಂದು ಕಡೆ ಕೋವಿಡ್ ಮುನ್ನೆಚ್ಚರಿಕೆ ವೇಳೆ ಕಾರ್ಯಾಚರಣೆ ದೊಡ್ಡ ಸವಾಲಾಗಿದೆ. ಹೀಗಾಗಿ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧ ಮಾಡುವ ವಿಚಾರ ಸರಕಾರದ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು.

ನಗರದಲ್ಲಿ ವಾಯುಮಾಲಿನ್ಯ ಕಡಿಮೆ ಮಾಡುವುದರ ಜೊತೆಗೆ ನಗರವನ್ನು ಸುಂದರವಾಗಿ ಇಡಬೇಕಾಗಿರುವುದು ಪಾಲಿಕೆಯ ಕೆಲಸ. ಆರೋಗ್ಯ ಇಲಾಖೆಯ ಅಭಿಪ್ರಾಯ ಕೇಳಿ ಸರಕಾರ ನಿರ್ಧಾರ ಮಾಡುತ್ತದೆ. ಅದಾದ ಮೇಲೆ ಪಾಲಿಕೆಯು ಸರಕಾರದ ಆದೇಶವನ್ನು ಪಾಲಿಸುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News