ಸ್ಟ್ಯಾನ್‍ಪೋರ್ಡ್ ವಿವಿ ಸಂಶೋಧಕರ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂವಿವಿ ಪ್ರಾಧ್ಯಾಪಕ ಡಾ.ಶಿವಕುಮಾರ್

Update: 2020-11-06 11:25 GMT

ಬೆಂಗಳೂರು, ನ.6: ಅಮೆರಿಕಾದ ಪ್ರತಿಷ್ಠಿತ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯವು ಜಗತ್ತಿನ ಗುಣಮಟ್ಟದ ಸಂಶೋಧಕರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಅದರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಗಣಿತ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ..ಐ.ಎಸ್.ಶಿವಕುಮಾರ್ ಸ್ಥಾನ ಪಡೆದಿದ್ದಾರೆ

ಅವರ ಹೆಸರನ್ನು ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಟ್ರ್ಯಾನ್ಸ್ ಪೋರ್ಟ್ ವಿಭಾಗದಲ್ಲಿ ಉಲ್ಲೇಖಿಸಿದ್ದು, ಜಾಗತಿಕ ಶ್ರೇಣಿಯಲ್ಲಿ 1494ನೇ ಸ್ಥಾನ ಪಡೆದಿದ್ದಾರೆ. ಅವರು ದ್ರವ ಚಲನಶಾಸ್ತ್ರದಲ್ಲಿ ಉನ್ನತ ಸಂಶೋಧನೆಯನ್ನು ಕೈಗೊಂಡು ಈವರೆಗೆ 220 ಸಂಶೋಧನಾ ಪ್ರಬಂಧಗಳನ್ನೂ ಪ್ರಕಟಿಸಿದ್ದಾರೆ.

ವಿಶ್ವದ ಅತ್ಯುನ್ನತ ಸಂಶೋಧನಾ ಸಂಸ್ಥೆಗಳಲ್ಲಿ ಸಂದರ್ಶಕ ವಿಜ್ಞಾನಿಯಾಗಿ ಕೆಲಸ ನಿರ್ವಹಿಸಿ ಸಹಭಾಗಿತ್ವದಲ್ಲಿ ಅನ್ವಯಿಕ ಗಣಿತಶಾಸ್ತ್ರದಲ್ಲಿ ಸಂಶೋಧನೆ ನಡೆಸಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟನೆಯಲ್ಲಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News