ಟ್ರಂಪ್ ಸೋಲೊಪ್ಪಿಕೊಳ್ಳಬೇಕು: ಮೆಲಾನಿಯಾ ಟ್ರಂಪ್ ಬಯಕೆ

Update: 2020-11-09 07:23 GMT

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ವಿರುದ್ಧ ಅನುಭವಿಸಿರುವ ಹೀನಾಯ ಸೋಲನ್ನು ಡೊನಾಲ್ಡ್ ಟ್ರಂಪ್ ಒಪ್ಪಿಕೊಳ್ಳಬೇಕೆಂದು ಪತ್ನಿ ಮೆಲಾನಿಯಾ ಟ್ರಂಪ್ ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆಯ ಕುರಿತು ಮೆಲಾನಿಯಾ ಈ ವರೆಗೆ ಬಹಿರಂಗವಾಗಿ ಪ್ರತಿಕ್ರಿಯೆ ನೀಡಿಲ್ಲ. ಅವರು ಖಾಸಗಿಯಾಗಿ ತನ್ನದೇ ಆದ ಅಭಿಪ್ರಾಯ ಹೊಂದಿದ್ದಾರೆ ಎಂದು ಸಿಎನ್‌ಎನ್ ಸುದ್ದಿವಾಹಿನಿ ವರದಿ ಮಾಡಿದೆ.

ಮೆಲಾನಿಯಾ ಅವರು ಕಳೆದ ತಿಂಗಳು ಟ್ರಂಪ್ ಗೆಲುವಿಗಾಗಿ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಜಾರೆಡ್ ಕುಶ್ನರ್(ಟ್ರಂಪ್ ಅಳಿಯ)ಅವರು ಸೋಲೊಪ್ಪಿಕೊಳ್ಳುವಂತೆ ಈಗಾಗಲೇ ಟ್ರಂಪ್ ಬಳಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಸಿಎನ್‌ಎನ್‌ಗೆ ತಿಳಿಸಿವೆ. ಬೈಡನ್ ಅವರು ತಾನೇ ಮುಂದಿನ ಅಧ್ಯಕ್ಷ ಎಂದು ಸುಳ್ಳು ಘೋಷಣೆ ಮಾಡುತ್ತಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ರವಿವಾರ ಹೇಳಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News