ಕೊಹ್ಲಿಗೆ ರಜೆ ಮಂಜೂರು

Update: 2020-11-09 18:46 GMT

 ಹೊಸದಿಲ್ಲಿ: ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಈ ವೇಳೆ ಪತ್ನಿ ಅನುಷ್ಕಾ ಶರ್ಮಾ ಜೊತೆ ಇರಲು ಬಯಸಿರುವುದರಿಂದ ಬಿಸಿಸಿಐ ಅವರಿಗೆ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಬಳಿಕ ರಜೆ ಮಂಜೂರು ಮಾಡಿದೆ.

ಡಿ.17ರಿಂದ 21ರ ತನಕ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದ ಬಳಿಕ ಅವರು ತವರಿಗೆ ವಾಪಸಾಗಲು ಬಿಸಿಸಿಐ ರಜೆ ಮಂಜೂರು ಮಾಡಿದೆ ಟ್ವೆಂಟಿ-20 ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಸ್ಪಿನ್ನರ್ ವರುಣ್ ಚಕ್ರವರ್ತಿ ಗಾಯಗೊಂಡಿರುವ ಕಾರಣ ಅವರ ಜಾಗಕ್ಕೆ ವೇಗದ ಬೌಲರ್ ಟಿ. ನಟರಾಜನ್ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News