ಐಪಿಎಲ್2020 ಫೈನಲ್: ಮುಂಬೈ ಗೆಲುವಿಗೆ 157 ರನ್ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

Update: 2020-11-10 15:50 GMT

ದುಬೈ: ಚೊಚ್ಚಲ ಐಪಿಎಲ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳಲು ಕಾತರದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ 5ನೇ ಬಾರಿಯ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಮುಂಬೈ ಇಂಡಿಯನ್ಸ್ ಇಂದು ಫೈನಲ್ ನಲ್ಲಿ ಸೆಣಸಾಡುತ್ತಿದ್ದು, ಮೊದಲ ಇನ್ನಿಂಗ್ಸ್ ಆಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈಗೆ 157 ರನ್ ಗಳ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಡೆಲ್ಲಿ ನಿಗದಿತ 20 ಓವರ್ ಗಳಲ್ಲಿ 156 ರನ್ ಗಳಿಸಿತು. 

ಬೃಹತ್ ಮೊತ್ತ ದಾಖಲಿಸುವ ಯೋಚನೆಯಲ್ಲಿ ಬ್ಯಾಟಿಂಗಿಗಿಳಿದ ಡೆಲ್ಲಿಗೆ ಮೊದಲ ಎಸೆತದಲ್ಲೇ ಆರಂಭಿಕ ಆಘಾತ ಎದುರಾಯಿತು. ಕಳೆದ ಪಂದ್ಯದಲ್ಲಿ ಉತ್ತಮ ಆರಂಭ ನೀಡಿದ್ದ ಮಾರ್ಕಸ್‌ ಸ್ಟೋನಿಸ್‌ ಈ ಬಾರಿ ಸೊನ್ನೆ ಸುತ್ತಿದ್ದಾರೆ. ಬಳಿಕ ಮೂರನೇ ಓವರ್ ನಲ್ಲಿ ಡೆಲ್ಲಿಗೆ ಮತ್ತೊಂದು ಆಘಾತ ನೀಡಿದ ಟ್ರೆಂಟ್‌ ಬೌಲ್ಟ್, ‌ಅಜಿಂಕ್ಯ ರಹಾನೆಯ ವಿಕೆಟ್ ಕಬಳಿಸಿದರು. ಧವನ್ 15 ರನ್ ಗಳಿಸಿ ನಿರ್ಗಮಿಸಿದರು.

ಈ ವೇಳೆ ತಂಡಕ್ಕೆ ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಆಸರೆಯಾದರು. ಪಂತ್ 56 (38 ಎಸೆತ) ರನ್ ಗಳಿಸಿ ಔಟಾದರೆ, ಅಯ್ಯರ್ 65 (50 ಎಸೆತ) ಬಾರಿಸಿ ಔಟಾಗದೇ ಉಳಿದರು.

ಮುಂಬೈ ಇಂಡಿಯನ್ಸ್ ಪರ ಟ್ರೆಂಟ್ ಬೌಲ್ಟ್ 3, ಕಲ್ಟರ್ ನೈಲ್ 2 ಹಾಗೂ ಜಯಂತ್ ಯಾದವ್ 1 ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಗೆದ್ದರೆ ಐಪಿಎಲ್‌ ಪ್ರಶಸ್ತಿಗೆ ಹೊಸ ವಾರಸುದಾರ ಆಗಲಿದೆ. ರೋಹಿತ್ ಶರ್ಮಾ ಮುನ್ನಡೆಸುತ್ತಿರುವ ಮುಂಬೈ ಐದನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News