‘ಲಾಕ್‌ಡೌನ್’ ಕಾಲಿನ್ಸ್ ಡಿಕ್ಷನರಿಯ ವರ್ಷದ ಪದ

Update: 2020-11-10 18:35 GMT

ಲಂಡನ್, ನ. 10: 2020ರ ಸಾಲಿಗೆ ‘ಲಾಕ್‌ಡೌನ್’ನ್ನು ವರ್ಷದ ಪದವಾಗಿ ಆರಿಸಲಾಗಿದೆ ಎಂದು ಕಾಲಿನ್ಸ್  ಡಿಕ್ಷನರಿ ಮಂಗಳವಾರ ಹೇಳಿದೆ. ಕೋವಿಡ್-19 ಸಾಂಕ್ರಾಮಿಕ ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ಜಗತ್ತಿನಾದ್ಯಂತ ಜನರ ಓಡಾಟಗಳನ್ನು ನಿರ್ಬಂಧಿಸಲು ಸರಕಾರಗಳು ‘ಲಾಕ್‌ಡೌನ್’ ಹೇರಿದ ಬಳಿಕ ಈ ಪದ ಭಾರೀ ಪ್ರಮಾಣದಲ್ಲಿ ಚಲಾವಣೆಗೆ ಬಂದಿದೆ.

2020ರಲ್ಲಿ 2.5 ಲಕ್ಷಕ್ಕೂ ಅಧಿಕ ಬಾರಿ ‘ಲಾಕ್‌ಡೌನ್’ ಪದ ಬಳಕೆಯಾಗಿರುವುದನ್ನು ಕಾಲಿನ್ಸ್ ದಾಖಲಿಸಿದೆ. ಈ ಹಿಂದಿನ ವರ್ಷದಲ್ಲಿ ಈ ಪದದ ಬಳಕೆ ಕೇವಲ 4,000 ಬಾರಿ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News