ಚೀನಾ ವಿರುದ್ಧ ದಿಗ್ಬಂಧನ: ಅಮೆರಿಕ ಎಚ್ಚರಿಕೆ

Update: 2020-11-12 18:18 GMT

ವಾಶಿಂಗ್ಟನ್, ನ. 12: ನಾಲ್ವರು ಪ್ರಜಾಪ್ರಭುತ್ವ ಪರ ಸಂಸದರನ್ನು ಅನರ್ಹಗೊಳಿಸುವ ಮೂಲಕ ಚೀನಾವು ಹಾಂಕಾಂಗ್‌ನ ಸ್ವಾಯತ್ತೆಯನ್ನು ‘ಸಾರಾಸಗಟಾಗಿ ಉಲ್ಲಂಘಿಸಿದೆ’ ಎಂದು ಅವೆುರಿಕ ಬುಧವಾರ ಹೇಳಿದೆ ಹಾಗೂ ಇದಕ್ಕೆ ಪ್ರತಿಯಾಗಿ ಅದರ ವಿರುದ್ಧ ಇನ್ನಷ್ಟು ದಿಗ್ಬಂಧನಗಳನ್ನು ವಿಧಿಸುವುದಾಗಿ ಎಚ್ಚರಿಸಿದೆ.

‘‘ಹಾಂಕಾಂಗ್ ಸಂಸತ್ತಿನ ನಾಲ್ವರು ಪ್ರಜಾಪ್ರಭುತ್ವಪರ ಸಂಸದರನ್ನು ಅನರ್ಹಗೊಳಿಸುವ ಮೂಲಕ ಚೀನಾ ಕಮ್ಯುನಿಸ್ಟ್ ಪಕ್ಷವು ತನ್ನ ಅಂತರ್‌ರಾಷ್ಟ್ರೀಯ ಬದ್ಧತೆಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ’’ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯನ್ ಹೇಳಿದ್ದಾರೆ.

‘‘ಹಾಂಕಾಂಗ್‌ನ ಸ್ವಾತಂತ್ರ್ಯವನ್ನು ಹತ್ತಿಕ್ಕುವವರನ್ನು ಗುರುತಿಸಿ ಅವರ ವಿರುದ್ಧ ದಿಗ್ಬಂಧನವನ್ನು ವಿಧಿಸುವ ಕೆಲಸವನ್ನು ಅಮೆರಿಕ ಮುಂದುವರಿಸುತ್ತದೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News