ಜಾಗತಿಕ ಕೊರೋನ ಲಸಿಕೆ ಯೋಜನೆಗೆ 3,730 ಕೋಟಿ ರೂ. ದೇಣಿಗೆ

Update: 2020-11-12 18:20 GMT

ಪ್ಯಾರಿಸ್ (ಫ್ರಾನ್ಸ್), ನ. 12: ಎಲ್ಲ ದೇಶಗಳಿಗೆ ಸಮಾನವಾಗಿ ಲಭ್ಯವಿರುವ ಕೊರೋನ ವೈರಸ್ ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆ ಯೋಜನೆಗೆ 500 ಮಿಲಿಯ ಡಾಲರ್ (ಸುಮಾರು 3,730 ಕೋಟಿ ರೂಪಾಯಿ) ದೇಣಿಗೆ ನೀಡಲು ಹಲವಾರು ದೇಶಗಳು ಮತ್ತು ಪ್ರತಿಷ್ಠಾನಗಳು ಮುಂದಾಗಿವೆ.

ಪ್ಯಾರಿಸ್ ಶಾಂತಿ ವೇದಿಕೆಯ ಮೂರನೇ ವಾರ್ಷಿಕ ಸಮ್ಮೇಳನವು ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಗುರುವಾರ ಮತ್ತು ಶುಕ್ರವಾರ ನಡೆಯಲಿದ್ದು, ಕೋವಿಡ್-19 ಸಾಂಕ್ರಾಮಿಕವನ್ನು ಹೇಗೆ ಸೋಲಿಸಬಹುದು ಎಂಬ ವಿಷಯದಲ್ಲಿ ವಿಚಾರ ವಿನಿಮಯ ನಡೆಯಲಿದೆ. ಇದೇ ವೇದಿಕೆಯಲ್ಲಿ ವಿವಿಧ ದೇಶಗಳು ಮತ್ತು ಸಂಘಟನೆಗಳು ಲಸಿಕೆ ಯೋಜನೆಗೆ ತಮ್ಮ ದೇಣಿಗೆಗಳನ್ನು ಘೋಷಿಸಲಿವೆ.

ಯುರೋಪ್ ಸೇರಿದಂತೆ ಜಗತ್ತಿನಾದ್ಯಂತ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಅಗಾಧ ಹೆಚ್ಚಳ ವರದಿಯಾಗಿರುವ ಸಂದರ್ಭದಲ್ಲಿ ಈ ಸಮ್ಮೇಳನ ನಡೆಯುತ್ತಿದೆ.

ಕೋವಿಡ್-19 ನಿಭಾಯಿಸುವ ಯೋಜನೆಗೆ ಫ್ರಾನ್ಸ್ 100 ಮಿಲಿಯ ಯುರೋ (ಸುಮಾರು 880 ಕೋಟಿ ರೂಪಾಯಿ), ಸ್ಪೇನ್ 50 ಮಿಲಿಯ ಯುರೋ (ಸುಮಾರು 440 ಕೋಟಿ ರೂಪಾಯಿ) ಮತ್ತು ಯುರೋಪಿಯನ್ ಕಮಿಶನ್ 100 ಮಿಲಿಯ ಯುರೋ (ಸುಮಾರು 880 ಕೋಟಿ ರೂಪಾಯಿ) ದೇಣಿಗೆಗಳನ್ನು ಘೋಷಿಸುವವೆಂದು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News