ಸುಭದ್ರ ಹಿಂದೂ ಸಾಗರ-ಪೆಸಿಫಿಕ್ ವಲಯಕ್ಕೆ ಬೈಡನ್ ಒಲವು

Update: 2020-11-12 18:47 GMT

ವಾಶಿಂಗ್ಟನ್, ನ. 12: ಹಿಂದೂ ಮಹಾಸಾಗರ-ಪೆಸಿಫಿಕ್ ವಲಯವನ್ನು ಸುಭದ್ರ ಹಾಗೂ ಸಂಪದ್ಭರಿತಗೊಳಿಸುವ ಅಗತ್ಯವನ್ನು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಪ್ರತಿಪಾದಿಸಿದ್ದಾರೆ.

ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಯೊಶಿಹಿಡೆ ಸುಗ ಮತ್ತು ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ-ಇನ್ ಜೊತೆ ಬುಧವಾರ ಫೋನ್ ಸಂಭಾಷಣೆ ನಡೆಸಿದ ವೇಳೆ ಅವರು ಈ ವಿಷಯಕ್ಕೆ ಒತ್ತು ನೀಡಿದ್ದಾರೆ.

ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ವಿಜಯ ಗಳಿಸಿದ ಬೈಡನ್‌ರನ್ನು ಅಭಿನಂದಿಸುವುದಕ್ಕಾಗಿ ಈ ನಾಯಕರು ಅವರಿಗೆ ಫೋನ್ ಮಾಡಿದ್ದರು ಎಂದು ಬೈಡನ್‌ರ ಪ್ರಚಾರ ತಂಡ ತಿಳಿಸಿದೆ.

‘‘ಕೋವಿಡ್-19 ವಿಷಯದಲ್ಲಿ ಸಹಕಾರ ಏರ್ಪಡಿಸುವ, ಭವಿಷ್ಯದ ಜಾಗತಿಕ ಆರೋಗ್ಯ ಬಿಕ್ಕಟ್ಟುಗಳ ವಿರುದ್ಧ ತಡೆಯನ್ನು ನಿರ್ಮಿಸುವ ಹಾಗೂ ಜಾಗತಿಕ ಆರ್ಥಿಕ ಪುನಶ್ಚೇತನವನ್ನು ಆರಂಭಿಸುವ ಅಗತ್ಯವನ್ನು ಈ ನಾಯಕರು ಪ್ರತಿಪಾದಿಸಿದರು’’ ಎಂದು ಅವರ ಪ್ರಚಾರ ತಂಡವು ನೀಡಿರುವ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News