ಬಿಬಿಎಂಪಿ ವೈಟ್ ಟಾಪಿಂಗ್ ಕಾಮಗಾರಿ: ಸಂಚಾರ ದಟ್ಟಣೆ ಸಾಧ್ಯತೆ
Update: 2020-11-14 17:12 IST
ಬೆಂಗಳೂರು, ನ.14: ನಗರದ ಪ್ರಮುಖ ರಸ್ತೆಗಳಲ್ಲಿ ಬಿಬಿಎಂಪಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆ ಸಂಚಾರ ದಟ್ಟಣೆ ಸಮಸ್ಯೆ ಎದುರಾಗಲಿದೆ.
ನ.18 ರಿಂದ ಡಿ.27ರವರೆಗೆ ನಗರದ ಬಾಬುಸಾಪಾಳ್ಯ ಮೇಲ್ಸೇತುವೆಯಿಂದ ಹೊರಮಾವು ಕಡೆಗೆ ಹೋಗುವ ರಸ್ತೆ, ಹೊರಮಾವು ಕೆಳಸೇತುವೆ ಕಡೆಯಿಂದ ಹೆಬ್ಬಾಳಕ್ಕೆ ಹೋಗುವ ಮಾರ್ಗ, ಬಾಬುಸಾಪಾಳ್ಯ ಮೇಲ್ಸೇತುವೆ ಕಡೆಯಿಂದ ಹೆಬ್ಬಾಳ ಕಡೆಗೆ ಹೋಗುವ ರಸ್ತೆ. ಅದೇ ರೀತಿ, ಹೊರಮಾವು ಕೆಳಸೇತುವೆ ಕಡೆಯಿಂದ ರಾಮಮೂರ್ತಿ ನಗರ ಮಾರ್ಗದ ರಸ್ತೆವರೆಗೂ ಕಾಮಗಾರಿ ಆರಂಭವಾಗಲಿದ್ದು, ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಸ್ವಲ್ಪ ಎಚ್ಚರಿಕೆ ವಹಿಸಬೇಕಾಗಿದೆ. ಇಲ್ಲದಿದ್ದರೆ ದಟ್ಟಣೆಯಲ್ಲಿ ಖಚಿತವಾಗಿ ಸಿಲುಕಿ ಪರದಾಟ ಅನುಭವಿಸಬೇಕಾಗತ್ತದೆ.
ಈ ರಸ್ತೆಗಳ ಕಾಮಗಾರಿಗೆ ಸಂಚಾರಿ ಪೊಲೀಸರಿಂದಲೂ ಅನುಮತಿ ದೊರಕಿದೆ. ಕಾಮಗಾರಿ ನಡೆಯುವ ದಿನಗಳಲ್ಲಿ ವಾಹನಗಳನ್ನು ಸರ್ವೀಸ್ ರಸ್ತೆಯಲ್ಲಿ ಕಳಿಸಲು ಪೊಲೀಸರು ವ್ಯವಸ್ಥೆ ಮಾಡಿದ್ದಾರೆ.