×
Ad

ಬೆಂಗಳೂರು: ಪಟಾಕಿ ಸಿಡಿಸುವ ಸಂದರ್ಭ 10 ಮಂದಿಗೆ ಗಾಯ

Update: 2020-11-15 15:34 IST

ಬೆಂಗಳೂರು, ನ.15: ಶನಿವಾರ ಪಟಾಕಿ ಸಿಡಿಸಲು ಹೋಗಿ ಸುಮಾರು 10 ಜನರಿಗೆ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. 

ದೀಪಾವಳಿ ಹಬ್ಬದಲ್ಲಿ ಪಟಾಕಿಯಿಂದ ಸೃಷ್ಟಿಯಾಗುವ ಸಮಸ್ಯೆ ಅಷ್ಟಿಷ್ಟಲ್ಲ. ಈ ಬಾರಿಯೂ ಅಂತಹ ಪ್ರಕರಣಗಳು ವರದಿಯಾಗಿವೆ. ಶನಿವಾರ ಸುಮಾರು 10 ಮಂದಿಗೆ ಗಾಯಗಳಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಿಂಟೋ ಆಸ್ಪತ್ರೆಯಲ್ಲಿ ಒಬ್ಬರು, ನಾರಾಯಣ ಆಸ್ಪತ್ರೆಯಲ್ಲಿ ನಾಲ್ಕು ಮಂದಿ, ನೇತ್ರಧಾಮದಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ನಾಲ್ವರಿಗೆ ತೀವ್ರ ಗಾಯಗಳಾಗಿವೆ. ವಿಜಯನಂದ ನಗರದ 12 ವರ್ಷದ ಬಾಲಕನಿಗೆ ಫ್ಲವರ್ ಪಾಟ್ ಪಟಾಕಿಯಿಂದ ಕಣ್ಣಿನಿಗೆ ಹಾನಿಯಾಗಿದ್ದು, ಮಿಂಟೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News