100ನೇ ಹರೆಯಕ್ಕೆ ಕಾಲಿಟ್ಟ ಚಂದೋರ್ಕರ್

Update: 2020-11-21 17:45 GMT

ಹೊಸದಿಲ್ಲಿ, ನ.21: ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ರಘುನಾಥ್ ಚಂದೋರ್ಕರ್ ಅವರು ಶನಿವಾರ ನೂರನೇ ವರ್ಷಕ್ಕೆ ಕಾಲಿರಿಸಿದ್ದಾರೆ.

ನೂರನೇ ಹುಟ್ಟುಹಬ್ಬವನ್ನು ಆಚರಿಸಿದ ಮೂರನೇ ಭಾರತದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಚಂದೋರ್ಕರ್ ಏಳು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಮಹಾರಾಷ್ಟ್ರ (1943-44 ರಿಂದ 1946-47) ಮತ್ತು ಬಾಂಬೈ (1950-51) ತಂಡವನ್ನು ಪ್ರತಿನಿಧಿಸಿದ್ದರು. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಏಳು ಪಂದ್ಯಗಳಲ್ಲಿ 155 ರನ್ ಗಳಿಸಿದ್ದರು. ಅವರು ಮೂರು ಕ್ಯಾಚ್ ಮತ್ತು ಎರಡು ಸ್ಟಂಪ್ ದಾಖಲೆಯನ್ನು ಹೊಂದಿದ್ದಾರೆ. ಪ್ರೊ. ಡಿ.ಬಿ.ಯೋಧರ್ (1892-1993) ಮತ್ತು ವಸಂತ್ ರೈಜಿ (1920-2020) ಅವರು 100 ಜನ್ಮದಿನಗಳನ್ನು ಆಚರಿಸಿದ ಭಾರತದ ಇತರ ಕ್ರಿಕೆಟಿಗರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News