ಹಣಕ್ಕಾಗಿ ಡ್ರಗ್ಸ್ ಪೆಡ್ಲರ್ ಗಳಿಗೆ ಇಲಾಖೆಯ ಮಾಹಿತಿ ನೀಡುತ್ತಿದ್ದ ಪೊಲೀಸ್ ಕಾನ್‍ಸ್ಟೇಬಲ್‍

Update: 2020-11-23 14:29 GMT

ಬೆಂಗಳೂರು, ನ.23: ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳಿಗೆ ಸಹಕಾರ ನೀಡುತ್ತಿದ್ದ ಆರೋಪಿ ಪೊಲೀಸ್ ಕಾನ್‍ಸ್ಟೇಬಲ್‍ ಪ್ರಭಾಕರ್ ಕೇವಲ ಎರಡ್ಮೂರು ಸಾವಿರ ರೂ.ಗೆ ಇಲಾಖೆಯ ಮಾಹಿತಿಗಳನ್ನು ಸೋರಿಕೆ ಮಾಡುತ್ತಿರುವುದನ್ನು ಸಿಸಿಬಿ ಅಧಿಕಾರಿಗಳು ಸಿಡಿಆರ್ (ಫೋನ್ ಕರೆಗಳ ವಿವರ) ಮೂಲಕ ಪತ್ತೆ ಹಚ್ಚಿದ್ದಾರೆ.

ಪೇದೆ ಪ್ರಭಾಕರ್, ಆರೋಪಿಗಳಿಗೆ ಎಲ್ಲೆಲ್ಲಿ ಹೋಗಿ ಡ್ರಗ್ಸ್ ಸಂಗ್ರಹಿಸಬೇಕು, ಹಾಗೂ ಪೊಲೀಸ್ ಇಲಾಖೆಯಲ್ಲಿ ಯಾವೆಲ್ಲಾ ಕ್ರಮಗಳನ್ನು ಜರುಗಿಸುತ್ತಿದ್ದರು ಎಂಬ ಬಗ್ಗೆ ವಿವರಗಳನ್ನು ನೀಡುತ್ತಿದ್ದ. ಸದಾಶಿವನಗರ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಭಾಕರ್ ಟೆಕ್ನಿಕಲ್ ವಿಭಾಗದಲ್ಲಿ ನಿಪುಣನಾಗಿದ್ದು, ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ. ಆರೋಪಿಗಳಿಗೆ ನೀವು ಈ ರೀತಿಯಾಗಿ ಕಾರ್ಯ ನಿರ್ವಹಿಸಿದರೆ ಸುರಕ್ಷಿತರಾಗಿರಬಹುದು ಎನ್ನುವ ಪ್ರತಿ ಮಾಹಿತಿಯನ್ನು ಒದಗಿಸುತ್ತಿದ್ದ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ಸೇರಿದಂತೆ ಇನ್ನಿತರ ಪ್ರಮುಖ ಆರೋಪಿಗಳಿಗೆ ಇಲಾಖೆ ಬಗೆಗಿನ ಎಲ್ಲ ಮಾಹಿತಿಗಳನ್ನು ನೀಡಿದ್ದ. ಅದಲ್ಲದೆ, ಸಿಡಿಆರ್ ಕಾಪಿಗಳನ್ನು ಸಹ ಕೇವಲ 2 ಸಾವಿರ ರೂ.ಪಡೆದು ಆರೋಪಿಗಳಿಗೆ ನೀಡುತ್ತಿದ್ದ ಎನ್ನುವುದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News