ಕೇರಳದ ಪೊಲೀಸ್ ಕಾಯ್ದೆ ರದ್ದತಿಗೆ ಸರಕಾರ ನಿರ್ಧಾರ

Update: 2020-11-24 14:59 GMT

ತಿರುವನಂತಪುರ: ಕೇರಳ ಪೊಲೀಸ್ ಕಾಯ್ದೆಗೆ ತರಲಾಗಿರುವ ವಿವಾದಾತ್ಮಕ ತಿದ್ದುಪಡಿಯನ್ನು ರದ್ದುಗೊಳಿಸಲು ಸುಗ್ರೀವಾಜ್ಞೆ ತರಲು ಕೇರಳದ ಎಡರಂಗ ನೇತೃತ್ವದ ಎಲ್ ಡಿಎಫ್ ಸರಕಾರ ಮಂಗಳವಾರ ನಿರ್ಧರಿಸಿದೆ.

ಸೆಕ್ಷನ್ 118-ಎ ರದ್ದುಪಡಿಸುವ ಸುಗ್ರೀವಾಜ್ಞೆಯನ್ನು ಹೊರಡಿಸುವಂತೆ ಮಂಗಳವಾರ ನಡೆದ ವಿಶೇಷ ಸಂಪುಟ ಸಭೆಯು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರಿಗೆ ಶಿಫಾರಸು ಮಾಡಿದೆ.

ತಿದ್ದುಪಡಿಯನ್ನು ರದ್ದು ಮಾಡಲು ಸುಗ್ರೀವಾಜ್ಞೆ ತರಲು ಕ್ಯಾಬಿನೆಟ್ ನಿರ್ಧರಿಸಿದೆ ಎಂದು ಸರಕಾರದ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News