ಬೆಂಗಳೂರು: ನ.26ರಂದು ಆಟೋ, ಓಲಾ, ಉಬರ್ ಚಾಲಕರ ಪ್ರತಿಭಟನೆ

Update: 2020-11-25 11:57 GMT

ಬೆಂಗಳೂರು, ನ.25: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನ.26ರಂದು ದೇಶವ್ಯಾಪಿ ಕಾರ್ಮಿಕ ಸಂಘಟನೆಗಳಿಂದ ಮುಷ್ಕರ ಹಿನ್ನೆಲೆ, ಓಲಾ, ಉಬರ್, ಆಟೋ, ಟ್ಯಾಕ್ಸಿ ಚಾಲಕರು ಗುರುವಾರದಂದು ರಸ್ತೆಗಿಳಿಯದಿರಲು ನಿರ್ಧರಿಸಿದ್ದಾರೆ. 

ಓಲಾ ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಸೇಠ್ ಹಾಗೂ ಆದರ್ಶ ಆಟೋ ಮತ್ತು ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಅವರು, ಕೊರೋನ ಹಿನ್ನೆಲೆಯಲ್ಲಿ ಚಾಲಕರು ಬಹಳಷ್ಟು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆದರೆ ಸರಕಾರ ಮಾತ್ರ ನಮ್ಮ ಸಹಾಯಕ್ಕೆ ಬರುತ್ತಿಲ್ಲ. ಹೀಗಾಗಿ ನಾವು ಗುರುವಾರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಪ್ರತಿಭಟನೆಗೆ 20ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ ಎಂದು ತಿಳಿಸಿದ್ದಾರೆ. 

ಚಾಲಕರ ಬೇಡಿಕೆಗಳು: ಸಾಲ ಮರುಪಾವತಿ ತಡೆ ಅವಧಿ ವಿಸ್ತರಣೆ ಮಾಡಬೇಕು, ಅಸಂಘಟಿತ ಚಾಲಕರಿಗೆ ಅಭಿವೃದ್ಧಿ ನಿಗಮ ಜಾರಿಯಾಗಬೇಕು, ಹೊಸ ಆಟೋ ಮಾರಾಟ ತೆರಿಗೆಯನ್ನು ಶೇ.17ರಿಂದ ಶೇ.5ಕ್ಕೆ ಇಳಿಕೆ ಮಾಡಬೇಕು. ಹಳೇ ವಾಹನಗಳಿಗೂ ಎಫ್‍ಸಿ, ಪ್ರಯಾಣ ದರ ಹೆಚ್ಚಳ ಮಾಡಬೇಕು. 

ಖಾಸಗಿ ಬ್ಯಾಂಕುಗಳು ಚಾಲಕರಿಂದ ಹೆಚ್ಚು ಬಡ್ಡಿ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. 15 ವರ್ಷದ ಹಳೆ ವಾಹನಗಳ ಫಲಕ ಎಫ್‍ಸಿ ನಿಲ್ಲಿಸಿರುವುದನ್ನು ರದ್ದುಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಚಾಲಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News