ನಿಧಾನಗತಿಯ ಬೌಲಿಂಗ್ : ಭಾರತ ತಂಡಕ್ಕೆ ದಂಡ ಹೇರಿದ ಐಸಿಸಿ

Update: 2020-11-28 11:22 GMT

ದುಬೈ: ಸಿಡ್ನಿಯಲ್ಲಿ ಶುಕ್ರವಾರ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡ ತಪ್ಪಿಗೆ ಭಾರತೀಯ ಕ್ರಿಕೆಟ್ ತಂಡಕ್ಕೆ ಐಸಿಸಿ ಪಂದ್ಯಶುಲ್ಕದಲ್ಲಿ ಶೇ.20ರಷ್ಟು ದಂಡವನ್ನು ವಿಧಿಸಿದೆ.

ಆಸ್ಟ್ರೇಲಿಯ ವಿರುದ್ಧ 66 ರನ್ ನಿಂದ ಸೋತಿರುವ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗವು 50 ಓವರ್ ಗಳ ಕೋಟಾವನ್ನು ಪೂರ್ಣಗೊಳಿಸಲು ನಾಲ್ಕು ಗಂಟೆ, 6 ನಿಮಿಷ ಸಮಯ ತೆಗೆದುಕೊಂಡಿತ್ತು.

ನಿಗದಿತ ಸಮಯದಲ್ಲಿ ಭಾರತವು ಒಂದು ಓವರ್ ಕಡಿಮೆ ಎಸೆದಿರುವುದನ್ನು ಪರಿಗಣಿಸಿರುವ ಐಸಿಸಿ ಮ್ಯಾಚ್ ರೆಫರಿ ಡೇವಿಡ್ ಬೂನ್ ದಂಡ ವಿಧಿಸಲು ಶಿಫಾರಸು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News