ಪ್ರತಿ ಲೀ.ಗೆ 82 ರೂ.ದಾಟಿದ ಪೆಟ್ರೋಲ್, ಡೀಸೆಲ್ ಬೆಲೆಯೂ 72 ರೂ.ಗೂ ಅಧಿಕ

Update: 2020-11-28 14:52 GMT

ಹೊಸದಿಲ್ಲಿ,ನ.28: ಕಳೆದ ಒಂಭತ್ತು ದಿನಗಳಲ್ಲಿ ಎಂಟನೇ ಬೆಲೆ ಏರಿಕೆಯ ಬಳಿಕ ದಿಲ್ಲಿಯಲ್ಲಿ ಶನಿವಾರ ಪ್ರತಿ ಲೀ.ಪೆಟ್ರೋಲ್ ಬೆಲೆ 82 ರೂ.ದಾಟಿದ್ದರೆ,ಡೀಸೆಲ್ ಬೆಲೆಯೂ 72 ರೂ.ಗಳ ಗಡಿಯನ್ನು ದಾಟಿದೆ.

 ಕೋವಿಡ್-19ಗೆ ಲಸಿಕೆ ಶೀಘ್ರವೇ ಲಭ್ಯವಾಗಲಿದೆ ಎಂಬ ಆಶಯದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ತೈಲಬೆಲೆಗಳಲ್ಲಿ ಹೆಚ್ಚಳವಾಗಿರುವುದರಿಂದ ಶನಿವಾರ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀ.ಗೆ 24 ಪೈಸೆ ಮತ್ತು ಡೀಸೆಲ್‌ಗೆ 27 ಪೈಸೆ ಹೆಚ್ಚಿಸಲಾಗಿದೆ. ಇದರೊಂದಿಗೆ ದಿಲ್ಲಿಯಲ್ಲಿ ಪ್ರತಿ ಲೀ.ಪೆಟ್ರೋಲ್ ಬೆಲೆ 81.89 ರೂ.ನಿಂದ 82.13 ರೂ.ಗೆ ಮತ್ತು ಡೀಸೆಲ್ ಬೆಲೆ 71.86 ರೂ.ನಿಂದ 72.13 ರೂ.ಗೆ ಏರಿಕೆಯಾಗಿವೆ. ತೈಲ ಮಾರಾಟ ಕಂಪನಿಗಳು ಸುಮಾರು ಎರಡು ತಿಂಗಳ ವಿರಾಮದ ಬಳಿಕ ನ.20ರಿಂದ ದೈನಂದಿನ ಬೆಲೆ ಪರಿಷ್ಕರಣೆಯನ್ನು ಪುನರಾರಂಭಿಸಿದ್ದು,ಈ ಒಂಭತ್ತು ದಿನಗಳಲ್ಲಿ ಪ್ರತಿ ಲೀ.ಗೆ ಪೆಟ್ರೋಲ್ 1.07 ರೂ. ಮತ್ತು ಡೀಸೆಲ್ 1.67 ರೂ.ಗಳಷ್ಟು ದುಬಾರಿಯಾಗಿವೆ.

ನ.20ರ ಏರಿಕೆಗೆ ಮುನ್ನ ಪೆಟ್ರೋಲ್ ಬೆಲೆಗಳು ಸೆ.22ರಿಂದ ಮತ್ತು ಡೀಸೆಲ್ ಬೆಲೆಗಳು ಅ.2ರಿಂದ ಯಾವುದೇ ಬದಲಾವಣೆಯಿಲ್ಲದೆ ಸ್ಥಿರವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News