ಚುನಾವಣೆಯಲ್ಲಿ ಅಕ್ರಮ: ಟ್ರಂಪ್ ಆರೋಪವನ್ನು ತಿರಸ್ಕರಿಸಿದ ಮೇಲ್ಮನವಿ ನ್ಯಾಯಾಲಯ

Update: 2020-11-28 16:30 GMT

ವಾಶಿಂಗ್ಟನ್, ನ. 28: ಚುನಾವಣೆಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆರೋಪಗಳನ್ನು ಅಮೆರಿಕದ ಫೆಡರಲ್ ಮೇಲ್ಮನವಿ ನ್ಯಾಯಾಲಯವೊಂದು ಶುಕ್ರವಾರ ತಿರಸ್ಕರಿಸಿದೆ ಹಾಗೂ ಪೆನ್ಸಿಲ್ವೇನಿಯ ರಾಜ್ಯದಲ್ಲಿ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಗಳಿಸಿರುವ ವಿಜಯಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.

ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ವಂಚಿಸಲಾಗಿದೆ ಎಂಬ ಅವರ ಪ್ರಚಾರ ಅಭಿಯಾನದ ವಾದವನ್ನು ತಿರಸ್ಕರಿಸಿರುವ ಮೇಲ್ಮನವಿ ನ್ಯಾಯಾಲಯದ ಮೂವರು ನ್ಯಾಯಾಧೀಶರು, ಅವ್ಯವಹಾರ ಆರೋಪಗಳಿಗೆ ಯಾವುದೇ ಪುರಾವೆಯನ್ನು ಒದಗಿಸಲಾಗಿಲ್ಲ ಎಂಬ ಒಮ್ಮತದ ನಿರ್ಧಾರಕ್ಕೆ ಬಂದರು.

‘‘ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪಗಳು ಗಂಭೀರವಾಗಿವೆ. ಆದರೆ, ಚುನಾವಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳಿದ ಮಾತ್ರಕ್ಕೆ ಅವ್ಯವಹಾರ ನಡೆಯುವುದಿಲ್ಲ’’ ಎಂದು ನ್ಯಾಯಾಲಯ ಹೇಳಿತು.

ಚುನಾವಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ದೇಶಾದ್ಯಂತ ಟ್ರಂಪ್ ಪ್ರಚಾರ ತಂಡ ಮತ್ತು ಅವರ ರಿಪಬ್ಲಿಕನ್ ಪಕ್ಷದ ಸದಸ್ಯರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಆದರೆ, ಈವರೆಗೆ ಸುಮಾರು 25 ಪ್ರಕರಣಗಳಲ್ಲಿ ಅವರಿಗೆ ಸೋಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News