ಇನ್‍ಸ್ಟಾಗ್ರಾಂನಲ್ಲಿ ಪರಿಚಯವಾಗಿ ಯುವತಿಗೆ ಲಕ್ಷಾಂತರ ರೂ. ವಂಚಿಸಿದ ಯುವಕ: ದೂರು ದಾಖಲು

Update: 2020-11-30 12:24 GMT

ಬೆಂಗಳೂರು, ನ.30: ಇನ್‍ಸ್ಟಾಗ್ರಾಂನಲ್ಲಿ ಯುವತಿ ಅನ್ನು ಪರಿಚಯ ಮಾಡಿಕೊಂಡಿದ್ದ ದುಷ್ಕರ್ಮಿಯೋರ್ವ ಮದುವೆ ಆಗುವುದಾಗಿ ನಂಬಿಸಿ 2 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಾಂಡಿಚೇರಿ ಮೂಲದ ಕಾರ್ತಿಕ್ ವಂಚನೆ ಮಾಡಿದ್ದು ಆತನ ವಿರುದ್ಧ ವಂಚನೆಗೊಳಗಾದ ಯುವತಿ ದೂರು ನೀಡಿದ್ದು ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಯುವತಿಗೆ ಮೂರು ವರ್ಷಗಳ ಹಿಂದೆ ಇನ್‍ಸ್ಟಾಗ್ರಾಂ ಮೂಲಕ ಪರಿಚಯವಾದ ದುಷ್ಕರ್ಮಿಯು ಫೋನ್ ನಂಬರ್ ತೆಗೆದುಕೊಂಡು ವಾಟ್ಸ್ ಆಪ್‍ನಲ್ಲಿ ಕುಶಲೋಪರಿ ವಿಚಾರಿಸುತ್ತಿದ್ದ. 2018ನಲ್ಲಿ ಇಬ್ಬರು ಭೇಟಿಯಾಗಿದ್ದರು. ತದನಂತರ ಯುವತಿಗೆ ಪ್ರೇಮ ನಿವೇದನೆ ಮಾಡಿ ಮದುವೆಯಾಗುವುದಾಗಿ ಹೇಳಿದ್ದ ಎನ್ನಲಾಗಿದೆ.

ಇದಕ್ಕೆ ಯುವತಿ ಒಪ್ಪಿಗೆ ಸೂಚಿಸಿದ್ದಳು. ಇದಾದ ಬಳಿಕ ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ತಿಕ್ ಬಂದು ಭೇಟಿಯಾಗುತ್ತಿದ್ದು ಮೈಸೂರು ಪ್ರವಾಸಕ್ಕೆ ಕರೆದೊಯ್ದಿದ್ದ. ಈ ಅವಧಿಯಲ್ಲಿಯೇ ಹಂತ ಹಂತವಾಗಿ 2 ಲಕ್ಷ ರೂ. ನಗದು ಹಾಗೂ 6 ಗ್ರಾಂ. ಚಿನ್ನದ ಉಂಗುರ ಪಡೆದುಕೊಂಡು ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News