ಬೆಂಗಳೂರು ಗಲಭೆ ಪ್ರಕರಣ: ಮಾಜಿ ಕಾರ್ಪೊರೇಟರ್ ಝಾಕೀರ್ ಗೆ ಡಿ.16ರವರೆಗೆ ನ್ಯಾಯಾಂಗ ಬಂಧನ

Update: 2020-12-03 13:55 GMT

ಬೆಂಗಳೂರು, ಡಿ.3: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಬಂಧಿಸಿರುವ ಮಾಜಿ ಕಾರ್ಪೊರೇಟರ್ ಎ.ಆರ್.ಝಾಕೀರ್ ಅವರಿಗೆ ಡಿ.16ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಅದೇಶಿಸಿದೆ.

ಕೋರ್ಟ್‍ಗೆ ರಜೆ ಇದ್ದ ಕಾರಣ ಬಂಧಿತರಾದ ಝಾಕೀರ್ ಅವರನ್ನು ಗುರುವಾರ ಕೋರಮಂಗಲದಲ್ಲಿರುವ ಮನೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.

ಈ ವೇಳೆ ಆರೋಪಿ ಝಾಕೀರ್ ಅವರಿಗೆ ಡಿ.16ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ಪುಲಕೇಶಿನಗರ ವಾರ್ಡ್‍ನ ಮಾಜಿ ಕಾರ್ಪೊರೇಟರ್ ಆಗಿರುವ ಝಾಕೀರ್ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದು ಹೇಳಲಾಗುತ್ತಿದೆ. ತಿಂಗಳುಗಳಿಂದ ಪೊಲೀಸರಿಗೆ ಸೀಗದೆ ತಲೆಮರೆಸಿಕೊಂಡಿದ್ದ ಈತನನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಇನ್ನು ಇದೇ ಪ್ರಕರಣದಲ್ಲಿ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನೂ ಬಂಧಿಸಲಾಗಿದ್ದು, ಝಾಕೀರ್ ಬಂಧನದೊಡನೆ ಒಟ್ಟು ಪ್ರಕರಣ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News