ವಿವಾಹವಾದ ಒಂದೇ ದಿನಕ್ಕೆ ಪತ್ನಿ ಮೇಲೆ ಹಲ್ಲೆ ಆರೋಪ: ದೂರು ದಾಖಲು

Update: 2020-12-03 11:09 GMT

ಬೆಂಗಳೂರು, ಡಿ.3: ವಿವಾಹವಾದ ಒಂದೇ ದಿನಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಆರೋಪದಡಿ ಇಲ್ಲಿನ ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೊದಲ ದಿನವೇ ಭರತ್ ಎಂಬಾತ ಮದ್ಯದ ಅಮಲಿನಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅ.29 ರಂದು ವಿವಾಹದ ಬಳಿಕ ಭರತ್, ಮೊದಲ ದಿನವೇ ಮದ್ಯ ಸೇವಿಸಿ ಬಂದಿದ್ದ, ಇದರಿಂದ ಬೇಸತ್ತ ಪತ್ನಿ ಆತನೊಂದಿಗೆ ಇರಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭರತ್ ಹಾಗೂ ಆತನ ಪೋಷಕರು ಯುವತಿಗೆ ಚಿತ್ರಹಿಂಸೆ ನೀಡುವ ಜೊತೆಗೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಹಲ್ಲೆ ಕುರಿತು ಯುವತಿ ಪೋಷಕರಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಿದ ಬಳಿಕ ಭರತ್‍ಗೆ ಈ ಹಿಂದೆಯೇ ಬೇರೆ ಯುವತಿ ಜೊತೆ ವಿವಾಹವಾಗಿತ್ತು ಎಂಬುದು ಬಯಲಾಗಿದೆ. ಮೊದಲೇ ಮದುವೆಯಾಗಿರುವ ವಿಷಯ ಮುಚ್ಚಿಟ್ಟು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಈ ಕುರಿತು ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಭರತ್ ವಿರುದ್ಧ ಪತ್ನಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News