ಚುನಾವಣೆ ಪಕ್ಷಾತೀತವಾದರೂ, ನಮ್ಮ ಕಾರ್ಯಕರ್ತರಿಗೆ ಅಗತ್ಯ ಸಂದೇಶ ನೀಡುತ್ತೇವೆ: ಡಿ.ಕೆ ಶಿವಕುಮಾರ್

Update: 2020-12-04 11:46 GMT

ಬೆಂಗಳೂರು: 'ನಮಗೆ ಪಕ್ಷ, ಸಿದ್ಧಾಂತ ಇದೆ. ನಾವು ನಮ್ಮ ಕೆಲಸ ಮಾಡಬೇಕಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ನಾವು ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಬೇಕು ಅಂತಾ ನ್ಯಾಯಾಲಯದ ಮೆಟ್ಟಿಲೇರಿದ್ದೆವು. ನಮ್ಮ ಅರ್ಜಿಗೆ ನ್ಯಾಯಾಲಯ ಗೌರವಿಸಿ ಚುನಾವಣೆ ಆದೇಶಿಸಿದೆ. ಈ ಚುನಾವಣೆ ಪಕ್ಷಾತೀತವಾಗಿದ್ದರೂ ನಾವು ನಮ್ಮ ಕಾರ್ಯಕರ್ತರಿಗೆ ಸಂದೇಶ ನೀಡುತ್ತೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, 'ಸುರ್ಜೆವಾಲ ಅವರು ನಮ್ಮ ಪ್ರಧಾನ ಕಾರ್ಯದರ್ಶಿಗಳು. ಅವರು 6ರಂದು ಬೆಂಗಳೂರಿಗೆ ಆಗಮಿಸಿ ನಮಗೆ, ನಮ್ಮ ನಾಯಕರಿಗೆ ಮಾರ್ಗದರ್ಶನ ನೀಡಲಿದ್ದಾರೆ' ಎಂದರು.

'ಡಿ.ಜೆ ಹಳ್ಳಿ ಪ್ರಕರಣದಲ್ಲಿ ಜಾಕಿರ್ ಅವರು ಬಂಧನದ ವಿಚಾರವನ್ನು ಪತ್ರಿಕೆಗಳಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ನಂತರ ಪ್ರತಿಕ್ರಿಯೆ ನೀಡುತ್ತೇನೆ' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News