ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದ ತನಿಖೆ ನಡೆಸುತ್ತಿದ್ದ ಇನ್‍ಸ್ಪೆಕ್ಟರ್ ಸೇರಿ 43 ಪೊಲೀಸರ ವರ್ಗಾವಣೆ

Update: 2020-12-04 12:15 GMT

ಬೆಂಗಳೂರು, ಡಿ.4: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದ ತನಿಖೆ ನಡೆಸುತ್ತಿದ್ದ ಇನ್‍ಸ್ಪೆಕ್ಟರ್ ಸೇರಿ ಒಟ್ಟು 43 ಪೊಲೀಸ್ ಇನ್‍ಸ್ಪೆಕ್ಟರ್ ಗಳನ್ನು ದಿಢೀರ್ ವರ್ಗಾವಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಆತ್ಮಹತ್ಯೆ ಯತ್ನ ಎನ್ನಲಾದ ಪ್ರಕರಣವು ಇಲ್ಲಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇದರನ್ವಯ ಠಾಣೆಯ ಇನ್‍ಸ್ಪೆಕ್ಟರ್ ಎಂ.ಮಂಜುನಾಥ್ ಅವರು ತನಿಖೆ ನಡೆಸುತ್ತಿದ್ದರು. ಆದರೆ, ಏಕಾಏಕಿ ಅವರನ್ನು ಸಿಟಿ ಕಂಟ್ರೋಲ್ ರೂಂಗೆ ವರ್ಗಾವಣೆಗೊಳಿಸಲಾಗಿದೆ.

ಅದೇ ರೀತಿ, ಕೆ.ಜಿ.ಹಳ್ಳಿ ಇನ್‍ಸ್ಪೆಕ್ಟರ್ ಅಜಯ್‍ ಸಾರಥಿ ಅವರನ್ನು ಸಿಐಡಿಗೆ ಸ್ಥಳಾಂತರಿಸಲಾಗಿದೆ. ಹೀಗೆ, ವಿವಿಧ ಠಾಣೆಗಳ ಒಟ್ಟು 43 ಇನ್‍ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಲಾಗಿದ್ದು, ಕೂಡಲೇ ಸ್ಥಳ ನಿಯುಕ್ತಿಗೊಂಡ ಬಳಿಕ ಪಾಲನಾ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಐಜಿಪಿ ಡಾ.ಎಂ.ಎ.ಸಲೀಂ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News