ಸಿಲಿಕಾನ್ ಸಿಟಿಯಲ್ಲಿ ಮಾಸ್ಕ್ ಧರಿಸದವರಿಂದ 5.5 ಕೋಟಿ ರೂ. ದಂಡ ಸಂಗ್ರಹ

Update: 2020-12-04 13:06 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.4: ಸಿಲಿಕಾನ್ ಸಿಟಿಯಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕಾಗಿ ಕಡ್ಡಾಯವಾಗಿ ಮಾಸ್ಕ್ ಬಳಕೆ ಮಾಡುವಂತೆ ಸರಕಾರ ಆದೇಶಿಸಿದ್ದು, ಮಾಸ್ಕ್ ಧರಿಸದವರಿಂದ ದಂಡ ಸಂಗ್ರಹಿಸುತ್ತಿದ್ದು, ಇದುವರೆಗೂ ಮಾರ್ಷಲ್‍ಗಳು 5.5 ಕೋಟಿ ರೂ.ಗಳಷ್ಟು ದಂಡ ಸಂಗ್ರಹಿಸಿದ್ದಾರೆ.

ಕೋವಿಡ್ ಪ್ರಕರಣಗಳು ಅಧಿಕಗೊಳ್ಳುತ್ತಿದ್ದರಿಂದ ರಾಜಧಾನಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದ ಬಿಬಿಎಂಪಿಯು ಮಾಸ್ಕ್ ಗಳನ್ನು ಧರಿಸದವರಿಂದ ದಂಡ ವಸೂಲಿಗಾಗಿ ಮಾರ್ಷಲ್‍ಗಳನ್ನು ನೇಮಿಸಲಾಗಿತ್ತು. ಮೊದಲಿಗೆ ಒಂದು ಸಾವಿರ ರೂ. ದಂಡ ವಸೂಲಿ ಮಾಡಲಾಗುತ್ತಿತ್ತು. ಆದರೆ, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದರಿಂದ ಅನ್ನು 250 ರೂ.ಗೆ ಮಿತಿಗೊಳಿಸಲಾಗಿತ್ತು.

ಇದೀಗ ಮಾರ್ಷಲ್‍ಗಳು ನಗರದಾದ್ಯಂತ ಮಾಸ್ಕ್ ಗಳಿಲ್ಲದೇ ಸಂಚರಿಸುತ್ತಿದ್ದ ಸಾರ್ವಜನಿಕರನ್ನು ಪತ್ತೆಹಚ್ಚಿ ಅವರಿಂದ ಸುಮಾರು ಐದೂವರೆ ಕೋಟಿ ರೂ.ಗಳಷ್ಟು ದಂಡವನ್ನು ಸಂಗ್ರಹಿಸಿದ್ದಾರೆ. ಇನ್ನು ದಂಡ ಸಂಗ್ರಹಿಸುವ ಸಂದರ್ಭದಲ್ಲಿ ಕೆಲವೊಂದಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಕೆಲವು ಕಡೆಗಳಲ್ಲಿ ಮಾರ್ಷಲ್‍ಗಳ ಮೇಲೆ ಹಲ್ಲೆಗೂ ಮುಂದಾಗಿದ್ದರು. ಅದರ ನಡುವೆಯೂ ಮಾರ್ಷಲ್‍ಗಳು ದಂಡ ಸಂಗ್ರಹ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News