2018ರಿಂದ 6,210 ಕೋ. ರೂ.ಇಲೆಕ್ಟೋರಲ್ ಬಾಂಡ್‌ಗಳ ಮಾರಾಟ: ತೆರಿಗೆದಾರರ 1.85 ಕೋ. ರೂ. ವೆಚ್ಚ

Update: 2020-12-07 18:23 GMT

ಹೊಸದಿಲ್ಲಿ, ಡಿ. 7: 6,210 ಕೋಟಿ ರೂಪಾಯಿ ಮೊತ್ತದ, 13 ಹಂತಗಳಲ್ಲಿ ಮುದ್ರಿಸಲಾದ ಇಲಕ್ಟೋರಲ್ ಬಾಂಡ್‌ಗಳನ್ನು 2018ರಿಂದ ಮಾರ್ಚ್ ವರೆಗೆ ಮಾರಾಟ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ಅಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿಕ್ರಿಯೆ ಪಡೆದುಕೊಂಡಿದೆ.

 ಮಾರ್ಚ್ 19ರ ವರೆಗೆ 6,60,000 ಇಲೆಕ್ಟೋರಲ್ ಬಾಂಡ್‌ಗಳನ್ನು ಮುದ್ರಿಸಲಾಗಿದೆ. ಆದರೆ, ಅನಂತರ ಕೇವಲ 12,425 ಇಲೆಕ್ಟೋರಲ್ ಬಾಂಡ್‌ಗಳನ್ನು ಮಾತ್ರ ಮಾರಾಟ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಕೊಮೊಡೋರ್ ಲೋಕೇಶ್ ಬಾತ್ರಾ (ನಿವೃತ್ತ) ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆ ದೊರಕಿದೆ. 2018 ಜನವರಿ 2ರಂದು ಕೇಂದ್ರ ಸರಕಾರ ಎಲೆಕ್ಟೋರಲ್ ಬಾಂಡ್ ಯೋಜನೆಯ ಅಧಿಸೂಚನೆ ಹೊರಡಿಸಿತ್ತು. ಪ್ರಜೆಗಳು ಅಥವಾ ಕಾರ್ಪೋರೇಟ್ ಸಮೂಹಗಳು ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದಿಂದ ಖರೀದಿಸಲು ಸಾಧ್ಯವಾಗುವ ಹಾಗೂ ರಾಜಕೀಯ ಪಕ್ಷಗಳಿಗೆ ನೀಡುವ ವಿತ್ತೀಯ ಸಾಧನ ಈ ಇಲೆಕ್ಟೋರಲ್ ಬಾಂಡ್‌ಗಳು. ಈ ಬಾಂಡ್‌ಗಳನ್ನು ಪ್ರತಿವರ್ಷ ಜನವರಿ, ಎಪ್ರಿಲ್, ಜುಲೈ ಹಾಗೂ ಅಕ್ಟೋಬರ್‌ನಲ್ಲಿ ನಾಲ್ಕು ಬಾರಿ ಬಿಡುಗಡೆ ಮಾಡಲಾಗುತ್ತದೆ.

 ಈ ಭಾರಿ ಜನವರಿ ಹಾಗೂ ಅಕ್ಟೋಬರ್‌ನಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಮಾರ್ಚ್ ವರೆಗೆ 1000 ರೂ. ಮೌಲ್ಯದ ಕೇವಲ 47 ಇಲೆಕ್ಟೋರಲ್ ಬಾಂಡ್‌ಗಳು, 10,000 ರೂ. ಮೌಲ್ಯದ 70ಕ್ಕೂ ಅಧಿಕ ಇಲೆಕ್ಟೋರಲ್ ಬಾಂಡ್‌ಗಳು, 1 ಲಕ್ಷ ರೂ. ಮೌಲ್ಯದ 1,722 ಬಾಂಡ್‌ಗಳು ಮಾರಾಟವಾಗಿವೆ. ಇದಲ್ಲದೆ, 10 ಲಕ್ಷ ರೂ. ಮೌಲ್ಯದ 4,911 ಇಲೆಕ್ಟೋರಲ್ ಬಾಂಡ್‌ಗಳು, 1 ಕೋಟಿ ರೂ. ಮೌಲ್ಯದ 5,702 ಇಲೆಕ್ಟೋರ್ ಬಾಂಡ್‌ಗಳನ್ನು ಕೂಡ ಮಾರಾಟವಾಗಿವೆ. ಮುದ್ರಿಸಲಾದ 1 ಕೋಟಿ ರೂಪಾಯಿಯ ಇಲೆಕ್ಟೋರಲ್ ಬಾಂಡ್‌ಗಳಲ್ಲಿ ಸರಿಸುಮಾರು ಶೇ. 92 ಹಾಗೂ 10 ಲಕ್ಷ ರೂಪಾಯಿ ವೌಲ್ಯದ ಇಲೆಕ್ಟೋರಲ್ ಬಾಂಡ್‌ಗಳಲ್ಲಿ ಶೇ. 7 ಮಾರಾಟವಾಗಿವೆ. ಒಟ್ಟು ಮುದ್ರಿತವಾದ ಉಳಿದ ಮೌಲ್ಯದ ಇಲೆಕ್ಟೋರಲ್ ಬಾಂಡ್‌ಗಳಲ್ಲಿ ಸರಿಸುಮಾರು ಶೇ. 1ರಷ್ಟು ಮಾತ್ರ ಮಾರಾಟವಾಗಿವೆ. ಮುದ್ರಿಸಲಾದ ಇಲೆಕ್ಟೋರಲ್ ಬಾಂಡ್‌ಗಳಲ್ಲಿ 12ನ್ನು ರದ್ದುಗೊಳಿಸಲಾಗಿತ್ತು. ಇದರಲ್ಲಿ 1,000 ರೂ. ಮೌಲ್ಯ ಒಂದು ಹಾಗೂ ಉಳಿದವು 10 ಕೋ. ರೂ. ಮೌಲ್ಯದ್ದು. ಆದರೆ, ಈ ರದ್ದತಿಗೆ ಆರ್ಥಿಕ ವ್ಯವಹಾರಗಳ ಇಲಾಖೆ ಕಾರಣ ನೀಡಿಲ್ಲ ಎಂದು ಬಾತ್ರಾ ತಿಳಿಸಿದ್ದಾರೆ. 2018ರಲ್ಲಿ ಯೋಜನೆ ಆರಂಭವಾದ ಬಳಿಕ ಈ ಇಲೆಕ್ಟೋರಲ್ ಬಾಂಡ್‌ಗಳನ್ನು ಮುದ್ರಿಸಲು 1.85 ಕೋಟಿ ರೂಪಾಯಿ ವೆಚ್ಚವಾಗಿದೆ. ಕಡಿಮೆ ಮುಖಬೆಲೆಯ ದೊಡ್ಡ ಸಂಖ್ಯೆಯ ಇಲೆಕ್ಟೋರಲ್ ಬಾಂಡ್‌ಗಳು ಮಾರಾಟ ಆಗಿಲ್ಲ. ಇದರಿಂದ ಇಲೆಕ್ಟೋರಲ್ ಬಾಂಡ್‌ಗಳ ಮುದ್ರಣ ಹಾಗೂ ಮಾರಾಟಕ್ಕೆ ಮಾಡಿದ ತೆರಿಗೆದಾರರ ಹಣ ಪೋಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News