ಕ್ರೀಡಾಸ್ಫೂರ್ತಿಯ ಮೂಲಕ ಎಲ್ಲರ ಹೃದಯ ಗೆದ್ದ ಮುಹಮ್ಮದ್ ಸಿರಾಜ್

Update: 2020-12-11 13:21 GMT

ಸಿಡ್ನಿ, ಡಿ.11: ಜಸ್‌ಪ್ರೀತ್ ಬುಮ್ರಾ ಬ್ಯಾಟ್‌ನಿಂದ ಬೀಸಿದ ಚೆಂಡು ಕ್ಯಾಮರೂನ್ ಗ್ರೀನ್ ಅವರ ತಲೆಗೆ ಅಪ್ಪಳಿಸಿದ್ದು, ಈ ವೇಳೆ ಕ್ರೀಡಾಸ್ಫೂರ್ತಿ ಮೆರೆದ ಮುಹಮ್ಮದ್ ಸಿರಾಜ್ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.

 ಭಾರತ ವಿರುದ್ಧ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಗ್ರೀನ್ ಅಭ್ಯಾಸ ಪಂದ್ಯದಲ್ಲಿ ಎರಡನೇ ಸ್ಪೆಲ್ ಎಸೆಯಲು ಮುಂದಾದರು. ಬುಮ್ರಾ ಅವರು ನೇರವಾಗಿ ಬೌಲರ್ ಗ್ರೀನ್ ಅವರತ್ತ ಚೆಂಡನ್ನು ಅಟ್ಟಿದರು. ಚೆಂಡು 21ರ ಹರೆಯದ ಗ್ರೀನ್ ಅವರ ತಲೆಯ ಒಂದು ಬದಿಗೆ ಜೋರಾಗಿ ತಾಗಿತು.

 ಆಗ ನಾನ್‌ಸ್ಟ್ರೈಕ್ ತುದಿಯಲ್ಲಿದ್ದ ಸಿರಾಜ್ ರನ್‌ಗಾಗಿ ಓಡದೇ ಬ್ಯಾಟ್‌ನ್ನು ಬಿಟ್ಟು ಗ್ರೀನ್ ಅವರತ್ತ ಧಾವಿಸಿದರು. ಚೆಂಡಿನ ಏಟಿಗೆ ಪಿಚ್ ಮೇಲೆ ಕುಸಿದುಬಿದ್ದ ಗ್ರೀನ್ ಅವರನ್ನು ಟೀಮ್ ವೈದ್ಯರುಗಳು ಪರೀಕ್ಷೆ ನಡೆಸಿದರು. ಒಂದೆರಡು ನಿಮಿಷ ಪರೀಕ್ಷೆ ನಡೆಸಿದ ಬಳಿಕ ಗ್ರೀನ್ ಅವರನ್ನು ಡ್ರೆಸ್ಸಿಂಗ್ ರೂಮ್‌ಗೆ ಕರೆದೊಯ್ಯಲಾಯಿತು.

ಗ್ರೀನ್ ಗಾಯಗೊಂಡು ಮೈದಾನ ತೊರೆದ ಹಿನ್ನೆಲೆಯಲ್ಲಿ ಐಸಿಸಿ ನಿಯಮದ ಪ್ರಕಾರ ಪ್ಯಾಟ್ರಿಕ್ ರೋವ್ ಬದಲಿ ಆಟಗಾರನಾಗಿ ಮೈದಾನಕ್ಕಿಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News