‘ಟೈಮ್’ ವರ್ಷದ ವ್ಯಕ್ತಿಗಳಾಗಿ ಬೈಡನ್, ಕಮಲಾ ಹ್ಯಾರಿಸ್

Update: 2020-12-11 16:26 GMT

ನ್ಯೂಯಾರ್ಕ್, ಡಿ. 11: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಗೆಲುವು ಸಾಧಿಸಿರುವುದಕ್ಕಾಗಿ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಮತ್ತು ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ರನ್ನು ‘ಟೈಮ್’ ಮ್ಯಾಗಝಿನ್‌ನ 2020ರ ‘ವರ್ಷದ ವ್ಯಕ್ತಿ’ ಎಂಬುದಾಗಿ ಗುರುವಾರ ಘೋಷಿಸಲಾಗಿದೆ.

‘‘ಅಮೆರಿಕದ ಕತೆಯನ್ನು ಬದಲಾಯಿಸಿರುವುದಕ್ಕಾಗಿ, ಸಹಾನುಭೂತಿಯ ಶಕ್ತಿಗಳು ವಿಭಜಿಸುವ ಶಕ್ತಿಗಳಿಗಿಂತ ಶ್ರೇಷ್ಠ ಎನ್ನುವುದನ್ನು ತೋರಿಸಿರುವುದಕ್ಕಾಗಿ, ದುಃಖಿಸುವ ಜಗತ್ತಿನಲ್ಲಿ ಸಾಂತ್ವನದ ಲೇಪವನ್ನು ಹರಡಿರುವುದಕ್ಕಾಗಿ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ’’ ಎಂದು ‘ಟೈಮ್’ ತನ್ನ ಆಯ್ಕೆಗೆ ವಿವರಣೆ ನೀಡಿದೆ.

‘ಟೈಮ್’ ಮ್ಯಾಗಝಿನ್‌ನ ಮುಖಪುಟದಲ್ಲಿ 78 ವರ್ಷದ ವಯಸ್ಸಿನ ಬೈಡನ್ ಮತ್ತು 55 ವರ್ಷದ ಕಮಲಾರ ಚಿತ್ರಗಳೊಂದಿಗೆ ‘ಅಮೆರಿಕದ ಕತೆ ಬದಲಾಗುತ್ತಿದೆ’ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News