ನಾಸಾ ಆಯ್ಕೆಮಾಡಿದ ಚಂದ್ರಯಾನ ತಂಡದಲ್ಲಿ ಭಾರತ ಮೂಲದ ಅಮೆರಿಕನ್‌ಗೆ ಸ್ಥಾನ

Update: 2020-12-11 16:10 GMT

ವಾಷಿಂಗ್ಟನ್, ಡಿ.11: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆಯ್ಕೆ ಮಾಡಿರುವ 18 ಗಗನಯಾತ್ರಿಗಳ ತಂಡದಲ್ಲಿ 43 ವರ್ಷದ ಭಾರತ ಮೂಲದ ಅಮೆರಿಕನ್ ರಾಜಾ ಚಾರಿ ಸ್ಥಾನ ಪಡೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಅಮೆರಿಕದ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟೇಷನ್ (ನಾಸಾ) ಹಮ್ಮಿಕೊಂಡಿರುವ ಮಾನವ ಸಹಿತ ಚಂದ್ರಯಾನಕ್ಕೆ ಆಯ್ಕೆ ಮಾಡಿರುವ 18 ಗಗನಯಾತ್ರಿಗಳಲ್ಲಿ ಅಮೆರಿಕ ವಾಯುಪಡೆಯಲ್ಲಿ ಕರ್ನಲ್ ಆಗಿರುವ ಭಾರತ ಮೂಲದ ರಾಜಾ ಜಾನ್ ವರ್ಪುತೂರ್ ಚಾರಿ ಸ್ಥಾನ ಪಡೆದಿದ್ದಾರೆ. ಆಯ್ಕೆಯಾದವರಲ್ಲಿ ಅರ್ಧಾಂಶದಷ್ಟು ಮಂದಿ ಮಹಿಳೆಯರು. ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಬುಧವಾರ ಗಗನಯಾತ್ರಿಗಳ ಹೆಸರನ್ನು ಘೋಷಿಸಿದ್ದಾರೆ.

ಅಮೆರಿಕ ವಾಯುಪಡೆ ಅಕಾಡೆಮಿಯಿಂದ ಗಗನಯಾನ ವಿಜ್ಞಾನ ಇಂಜಿನಿಯರಿಂಗ್ ಪದವಿ ಮತ್ತು ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸ್ನಾತಕೋತ್ತರ ಪದವಿ ಪಡೆದಿರುವ ರಾಜಾ ಚಾರಿ, ಅಮೆರಿಕದ ನೇವಲ್ ಟೆಸ್ಟ್ ಪೈಲಟ್ ಶಾಲೆಯಲ್ಲಿ ತರಬೇತಿ ಪಡೆದಿದ್ದು ಗಗನಯಾತ್ರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಮೂಲದ ಅಮೆರಿಕನ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News