ಜುಬೈಲ್ ಪ್ರಸ್ತುತ ಓದುಗರ ವೇದಿಕೆ ವತಿಯಿಂದ ಪ್ರಸ್ತುತ ಕ್ಯಾಲೆಂಡರ್ ಬಿಡುಗಡೆ

Update: 2020-12-13 16:45 GMT

ಜುಬೈಲ್: ಪ್ರಸ್ತುತ ಓದುಗರ ವೇದಿಕೆ ಜುಬೈಲ್ ಸೌದಿ ಅರೇಬಿಯಾ ಇದರ ವತಿಯಿಂದ ಪ್ರಸ್ತುತ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಜುಬೈಲ್ ನ ರೋಯಲ್ ಡೈನ್ ರೆಸ್ಟೋರೆಂಟ್ ನಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಮೊದಲಿಗೆ ಪ್ರಸಕ್ತ ನಮ್ಮ ದೇಶದ ಮಾಧ್ಯಮಗಳು ಎಂಬ ವಿಚಾರದಲ್ಲಿ ಚರ್ಚಾಕೂಟ ನಡೆಯಿತು.

ಚರ್ಚಾಕೂಟದಲ್ಲಿ ಇಂಡಿಯನ್ ಸೋಶಿಯಲ್ ಫಾರಂ ಇದರ ಕೇಂದ್ರ ಸಮಿತಿ ಸದಸ್ಯರಾದ ಅಶ್ರಫ್ ಮಂಗಳೂರು, ಇಂಡಿಯನ್ ಸೋಶಿಯಲ್ ಫೋರಂ ದಮ್ಮಾಮ್ ರಾಜ್ಯಾಧ್ಯಕ್ಷರಾದ ಶರೀಫ್ ಜೋಕಟ್ಟೆ ಮತ್ತು ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್ ಜುಬೈಲ್ ಇದರ ಐಟಿ ಮೆನೇಜರ್ ನದೀಮ್ ಭಾಗವಹಿಸಿದ್ದರು. ಈ ಚರ್ಚಾಕೂಟವನ್ನು ಪ್ರಸ್ತುತ ಓದುಗರ ವೇದಿಕೆ ಸಮಿತಿ ಸದಸ್ಯ ಅಶೀಕ್ ಮಚಾರ್ ನಡೆಸಿಕೊಟ್ಟರು.

ನಂತರ ನಡೆದಂತಹ ಕಾರ್ಯಕ್ರಮದಲ್ಲಿ ಇಸ್ಹಾಕ್ ಮಂಗಳೂರು ಪ್ರಸ್ತುತ ಕ್ಯಾಲೆಂಡರ್ 2021 ಬಿಡುಗಡೆಗೊಳಿಸಿ 'ಪ್ರಸಕ್ತ ಸನ್ನಿವೇಶದಲ್ಲಿ ಮಾದ್ಯಮಗಳ ಜವಾಬ್ದಾರಿ' ಎಂಬ ವಿಚಾರದಲ್ಲಿ ತಮ್ಮ ವಿಷಯವನ್ನು ಮಂಡಿಸಿದರು. ಪ್ರಸ್ತುತ ನಡೆದು ಬಂದ ದಾರಿ ಮತ್ತು ಸತ್ಯ ಸುದ್ದಿಗಳನ್ನು ಜನರಿಗೆ ತಲುಪಿಸಲು ಪ್ರಸ್ತುತದ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಪ್ರಸ್ತುತ ಓದುಗರ ವೇದಿಕೆಯ ಅಧ್ಯಕ್ಷರು ಮತ್ತು ಕಾರ್ಯಕ್ರಮದ ಅಧ್ಯಕ್ಷರು ಆದ ಸಲೀಂ ವೇಣೂರ್ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ‌ ನದೀಮ್ ಮೈಸೂರು, ಇಂಡಿಯಾ ಫಟೆರ್ನಿಟಿ ಫಾರಂ ದಮ್ಮಾಮ್ ಜಿಲ್ಲಾದ್ಯಕ್ಷರಾದ ಸಾಜಿದ್ ವಳವೂರ್ ಮತ್ತು ಇಂಡಿಯಾ ಫ್ರಟೆರ್ನಿಟಿ ಫಾರಂ ಜುಬೈಲ್ ಜಿಲ್ಲಾಧ್ಯಕ್ಷರಾದ ಅಬುಸ್ವಾಲಿಹ್ ಉಪಸ್ಥಿತರಿದ್ದರು.

ಪ್ರಸ್ತುತ ಕ್ಯಾಲೆಂಡರ್ 2021 ಇದರ ಜಾಹಿರಾತುದಾರರಾಗಿ ಗಲ್ಫ್ ಏಷಿಯನ್ ಮೆಡಿಕಲ್ ಸೆಂಟರ್, ರಕ್ವಾನಿ ಕಂಪನಿ, ಎಲೈಟ್ ಟ್ರೆಡಿಂಗ್ ಎಂಡ್ ಕಾಂಟ್ರಾಕ್ಟಿಂಗ್ ಕಂಪನಿ, ಅಲ್ ಖೋಬಾರ್ ಟ್ರೆಡಿಂಗ್ ಪ್ರೊಜೆಕ್ಟ್ ,ಫತೇಹ್ ಅಲ್ ಜುಬೈಲ್ ಮತ್ತು ಮಚಲಿ ಕಿಂಗ್ಡಮ್ ಎಂಬ ಸಂಸ್ಥೆಗಳು ಪ್ರಸ್ತುತ ಕ್ಯಾಲೆಂಡರ್ 2021 ರೊಂದಿಗೆ ಕೈ ಜೋಡಿಸಿದ್ದವು.

ಅನ್ಸರ್ ಕಾರ್ಕಳ ಕಾರ್ಯಕ್ರಮ  ನಿರೂಪಿಸಿದರು. ಮತೀನ್ ನಗೂರ್ ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News