×
Ad

6ನೇ ವೇತನ ಜಾರಿಗೆ ಸರಕಾರ ಸ್ಪಷ್ಟತೆ ನೀಡಿದರೆ10 ನಿಮಿಷಗಳಲ್ಲಿ ಮುಷ್ಕರ ವಾಪಸ್: ಸಾರಿಗೆ ನಿಗಮಗಳ ನೌಕರರ ಕೂಟ

Update: 2020-12-14 15:25 IST

ಬೆಂಗಳೂರು, ಡಿ.1: ಆರನೇ ವೇತನ ಆಯೋಗದ ಶಿಫಾರಸುಗಳ ಜಾರಿ ಕುರಿತು ಸರಕಾರದ ಪ್ರಮುಖರು ಸ್ಪಷ್ಟಪಡಿಸಿದರೆ ಹತ್ತು ನಿಮಿಷಗಳಲ್ಲಿ ಮುಷ್ಕರ ವಾಪಸ್ ಪಡೆಯುವುದಾಗಿ ಸಾರಿಗೆ ನಿಗಮಗಳ ನೌಕರರ ಕೂಟದ ಪ್ರತಿನಿಧಿಗಳು ತಿಳಿಸಿದ್ದಾರೆ.

ಇಂದಿಗೆ ನಾಲ್ಕನೇ ದಿನಕ್ಕೆ ಸಾರಿಗೆ ನೌಕರರ  ಮುಷ್ಕರ ಮುಂದುವರಿದಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಮೂಲಕ ರಾಜ್ಯ ಸರಕಾರ ಸಾರಿಗೆ ನಿಗಮಗಳ ಮುಷ್ಕರದ ಸ್ಥಳಕ್ಕೆ ಸಂಧಾನ ಸೂತ್ರಗಳನ್ನು ಲಿಖಿತವಾಗಿ ಕಳುಹಿಸಿತು.

ತದನಂತರ, ಲಿಖಿತ ಭರವಸೆಯ ಪತ್ರವನ್ನು ಕೋಡಿಹಳ್ಳಿ ಚಂದ್ರಶೇಖರ್ ಓದಿದರು.
ಈ ವೇಳೆ ನಮ್ಮ 10 ಬೇಡಿಕೆಗಳಲ್ಲಿ 9 ಬೇಡಿಕೆಗಳಿಗೆ ಸರಕಾರ ಒಪ್ಪಿಗೆ ಸೂಚಿಸಿದೆ. ಆದರೆ 6ನೇ ವೇತನ ಆಯೋಗದ ಕುರಿತು ಗೊಂದಲವಿದೆ, ಬೇಡಿಕೆಗಳನ್ನು ಪರಿಹರಿಸುವಲ್ಲಿ ಸ್ಪಷ್ಟತೆ ಇಲ್ಲ ಎಂದರು.

ಕೋಡಿಹಳ್ಳಿ ಚಂದ್ರಶೇಖರ್ ಪತ್ರವನ್ನ ಓದುವ ಸಮಯದಲ್ಲಿ ನೌಕರರು ತಮ್ಮ ಅಸಮಾಧಾನ ವ್ಯಕ್ತಪಡಿಸಿ ಮುಷ್ಕರ ಕ ಬಿಡದಿರುವಂತೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News