ಕೋವಿಡ್-19 ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತಾ ಪರಿಶೋಧನೆಗೆ ಸುಪ್ರೀಂ ಕೋರ್ಟ್ ಆದೇಶ

Update: 2020-12-18 18:37 GMT

ಹೊಸದಿಲ್ಲಿ,ಡಿ.18: ಬೆಂಕಿ ಆಕಸ್ಮಿಕಗಳು ಸಂಭವಿಸುವುದನ್ನು ತಡೆಗಟ್ಟಲು ದೇಶಾದ್ಯಂತದ ಕೋವಿಡ್-19 ಆಸ್ಪತ್ರೆಗಳ ಅಗ್ನಿ ಸುರಕ್ಷತಾ ಪರಿಶೋಧನೆಯನ್ನು ನಡೆಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಆಸ್ಪತ್ರೆಗಳಲ್ಲಿ ಅಗ್ನಿದುರಂತದಂತಹ ಆಕಸ್ಮಿಕಗಳು ಪುನರಾವರ್ತನೆಯಾಗದಂತೆ ಖಾತರಿಪಡಿಸಲು ಪ್ರತಿಯೊಂದು ರಾಜ್ಯವೂ ನೋಡಲ್ ಅಧಿಕಾರಿಯನ್ನು ನೇಮಿಸಬೇಕೆಂದು ನ್ಯಾಯಾಲಯ ತಿಳಿಸಿದೆ.

 ನಾಲ್ಕು ವಾರಗಳೊಳಗೆ ದೇಶದ ಎಲ್ಲಾ ಕೋವಿಡ್-19 ಆಸ್ಪತ್ರೆಗಳು ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ(ಎನ್‌ಓಸಿ)ವನ್ನು ಪಡೆಯುವಂತೆಯೂ ನ್ಯಾಯಾಲಯವು ಸೂಚಿಸಿದೆ. ನಿರಾಕ್ಷೇಪಣ ಪತ್ರ ನವೀಕರಿಸದ ಆಸ್ಪತ್ರೆಗಳವಿರುದ್ಧ ಶಿಸ್ತುಕ್ರಮವನ್ನು ಕೈಗೊಳ್ಳಲಾಗುವುದೆಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಎಸ್.ರೆಡ್ಡಿ ಹಾಗೂ ಎಂ.ಆರ್.ಶಾ ಅವರಿದ್ದ ನ್ಯಾಯಪೀಠ ಸೂಚಿಸಿದೆ. ಎಲ್ಲಾ ರಾಜ್ಯಗಳು ಈ ಕುರಿತಾಗಿ ಅನುಸರಣಾ ವರದಿಯನ್ನು ಸಲ್ಲಿಸುವಂತೆಯೂ ನ್ಯಾಯಾಲಯವು ರಾಜ್ಯಗಳಿಗೆ ಸೂಚಿಸಿದೆ. ಏಪ್ರಿಲ್‌ನಿಂದೀಚೆಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ಆರೋಗ್ಯಪಾಲನಾ ಸಿಬ್ಬಂದಿಗೆ ಆವರ್ತನೆಯ ಆಧಾರದಲ್ಲಿ ಬಿಡುವು ನೀಡಲು ಮಾರ್ಗದರ್ಶಿ ಸೂತ್ರ ಅಥವಾ ಕಾರ್ಯತಂತ್ರ ರೂಪಿಸುವಂತೆ ನ್ಯಾಯಾಲಯವು ರಾಜ್ಯಗಳಿಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News