ಜೀವನದ ಎರಡನೇ ಇನಿಂಗ್ಸ್ ಆರಂಭಿಸಿದ ಯಜುವೇಂದ್ರ ಚಹಾಲ್

Update: 2020-12-23 06:39 GMT

ಹೊಸದಿಲ್ಲಿ: ಭಾರತದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಮಂಗಳವಾರ ಧನುಶ್ರೀ ವರ್ಮಾ ಅವರನ್ನು ವಿವಾಹವಾಗುವ ಮೂಲಕ ಜೀವನದ ಎರಡನೇ ಇನಿಂಗ್ಸ್ ಆರಂಭಿಸಿದರು.

ರಾಯಲ್ ಚಾಲೆಂಜರ್ ಬೆಂಗಳೂರು(ಆರ್‌ಸಿಬಿ)ಸ್ಪಿನ್ನರ್ ಚಹಾಲ್ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಈ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಚಹಾಲ್ ಅವರು ಈ ವರ್ಷದ ಆಗಸ್ಟ್‌ನಲ್ಲಿ ಕೊರಿಯೋಗ್ರಾಫರ್ ಧನುಶ್ರೀ ವರ್ಮಾ ಅವರೊಂದಿಗೆ ಚಹಾಲ್ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದೇ ತಿಂಗಳು ಐಪಿಎಲ್‌ನಲ್ಲಿ ಭಾಗವಹಿಸಲು ಯುಎಇಗೆ ತೆರಳಿದ್ದರು. ಧನಶ್ರೀ ಕೂಡ ಟೂರ್ನಿ ನಡೆಯುತ್ತಿರುವಾಗಲೇ ಯುಎಇಗೆ ತೆರಳಿದ್ದರು. ಅಲ್ಲಿ ಅವರು ಸ್ವಲ್ಪ ಸಮಯ ಒಟ್ಟಿಗೆ ಕಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News