ಐಎಂಎ: ಹಣ ಮರುಪಾವತಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

Update: 2020-12-25 11:37 GMT

ಬೆಂಗಳೂರು, ಡಿ. 25: ವಿಶೇಷ ನ್ಯಾಯಾಲಯದ 2020ರ ಡಿ.23ರ ಆದೇಶದನ್ವಯ ಐ-ಮಾನಿಟರಿ ಅಡ್ವೈಸರಿ(ಐಎಂಎ) ಸಂಸ್ಥೆಯಲ್ಲಿ ಹಣ ಹೂಡಿರುವವರು ತಮ್ಮ ಹಣವನ್ನು ಮರು ಪಡೆಯಲು ಅರ್ಜಿಯನ್ನು ಸಲ್ಲಿಸಲು 2021ರ ಜನವರಿ 3ರ ವರೆಗೆ ಅವಧಿ ವಿಸ್ತರಿಸಲಾಗಿದೆ.

ಐಎಂಎ ಸಂಸ್ಥೆಯಲ್ಲಿ ಹಣ ಹೂಡಿರುವವರ ಬಳಿ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಅಥವಾ ಐಎಂಎ ಸಂಸ್ಥೆಯವರು ನೀಡಿರುವ ಗುರುತಿನ ಚೀಟಿ ಇಲ್ಲದೆಯೂ ತಮ್ಮ ಹಣವನ್ನು ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ.

ಸೆಕ್ಷನ್ 7(3)ರ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಅಧಿನಿಯಮ(2004)ರ ಪ್ರಕಾರ ನಿಗದಿಪಡಿಸಿದ ಕೊನೆಯ ದಿನದ ಒಳಗಾಗಿ ಅರ್ಜಿ ಸಲ್ಲಿಸದಿದ್ದರೆ ನಂತರ ಯಾವುದೇ ಕ್ಲೇಮುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಣೆ ನೀಡಲಾಗಿದೆ.

ಈ ಕುರಿತು ಹೆಚ್ಚಿನ ವಿವರಗಳಿಗೆ ಅರ್ಜಿದಾರರು ಕಾಲ್ ಸೆಂಟರ್ ಸಂಖ್ಯೆ 080-4688 5959ಗೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಕರೆ ಮಾಡಬಹುದು. ಅಲ್ಲದೆ, ವೆಬ್ ಸೈಟ್ imaclaims.karnataka.gov.in ಇ-ಮೇಲ್- splocaima20@gmail.com ವಾಟ್ಸ್ ಆ್ಯಪ್ ಸಂಖ್ಯೆ-79755 68880 ಅಥವಾ ಚಾಟ್‍ಬಾಕ್ಸ್ ಲಿಂಕ್ https:\\bot.v.connect.in\ ಅಥವಾ ಸಮಕ್ಷಮ ಪ್ರಾಧಿಕಾರದ ಕಚೇರಿ, 2ನೆ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಶಾಂತಿನಗರ ಬೆಂಗಳೂರು-560 027 ಇಲ್ಲಿ ಪಡೆಯಬಹುದು ಎಂದು ಐಎಂಎ ಪ್ರಕರಣದ ವಿಶೇಷ ಅಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News