×
Ad

ಹಿರಿಯ ವಕೀಲ ಹುದ್ದೆಗೆ ಅರ್ಜಿ ಆಹ್ವಾನಿಸಿದ ಹೈಕೋರ್ಟ್

Update: 2020-12-30 20:30 IST

ಬೆಂಗಳೂರು, ಡಿ.30: ಹಿರಿಯ ವಕೀಲ(ಡೆಸಿಗ್ನೇಟೆಡ್ ಸೀನಿಯರ್ ಕೌನ್ಸೆಲ್) ಹುದ್ದೆಗೆ ವಕೀಲ ಸಮುದಾಯದಿಂದ ಅರ್ಜಿಗಳನ್ನು ಮತ್ತು ಲಿಖಿತ ಪ್ರಸ್ತಾವನೆಗಳನ್ನು ಹೈಕೋರ್ಟ್ ಆಹ್ವಾನಿಸಿದೆ.

ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ನೋಟಿಫಿಕೇಷನ್ ಹೊರಡಿಸಿದ್ದಾರೆ. ಕರ್ನಾಟಕ ಹೈಕೋರ್ಟ್(ಡೆಸಿಗ್ನೇಷನ್ ಆಫ್ ಸೀನಿಯರ್ ಅಡ್ವೊಕೇಟ್ಸ್) ನಿಯಮಗಳು-2018ರ ನಿಯಮ 6(1)ರಡಿ ಅರ್ಜಿಗಳು ಹಾಗೂ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.

2021ರ ಜನವರಿ 18ರ ಸಂಜೆ 5 ಗಂಟೆ ಒಳಗೆ ಅರ್ಜಿ ಮತ್ತು ಲಿಖಿತ ಪ್ರಸ್ತಾವನೆಯನ್ನು ನಿಗದಿತ ನಮೂನೆಯಲ್ಲಿ ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠದ ರಿಜಿಸ್ಟ್ರಾರ್ (ನೇಮಕಾತಿ) ಅವರಿಗೆ ಸಲ್ಲಿಸಬೇಕು. ಅರ್ಜಿಯ ಸ್ಕ್ಯಾನ್ ಪ್ರತಿ ಮತ್ತು ಲಿಖಿತ ಪ್ರಸ್ತಾವನೆಯನ್ನು ಎಲ್ಲ ಅಗತ್ಯ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಲಗತ್ತಿಸಿ pss.dsa.hck@gmail.com ಗೆ ಇ-ಮೇಲ್ ಮಾಡಬಹುದು ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಹೈಕೋರ್ಟ್‍ನ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News