ಹೊಲದಲ್ಲಿ ಯುವತಿಯ ಶವಪತ್ತೆ; ಅತ್ಯಾಚಾರಗೈದು, ಕೊಲೆ ಶಂಕೆ

Update: 2021-01-01 14:47 GMT

ಚಿತ್ರಕೂಟ,ಜ.1: ಉತ್ತರಪ್ರದೇಶದ ಚಿತ್ರಕೂಟ ಜಿಲ್ಲೆಯ ಹೊಲವೊಂದರಲ್ಲಿ 24 ವರ್ಷ ವಯಸ್ಸಿನ ಯುವತಿಯ ಮೃತದೇಹ ಗುರುವಾರ ರಾತ್ರಿ ಪತ್ತೆಯಾಗಿದ್ದು, ಆಕೆಯನ್ನು ಅತ್ಯಾಚಾರಗೈದ ಬಳಿಕ ಕೊಲೆ ಮಾಡಲಾಗಿದೆಯೆಂದು ಕುಟುಂಬಿಕರು ಆರೋಪಿಸಿದ್ದಾರೆ.

ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಹಾಗೆ ಮೇಲ್ನೋಟಕ್ಕೆ ಕಾಣಿಸುತ್ತಿರುವುದಾಗಿ ಮಾವ್ ಪೊಲೀಸ್ ಠಾಣಾಧಿಕಾರಿ ಗುಲಾಬ್ ತ್ರಿಪಾಠಿ ತಿಳಿಸಿದ್ದಾರೆ.

 ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅದರ ವರದಿ ದೊರೆತ ಬಳಿಕ ಹೆಚ್ಚಿನ ವಿವರಗಳು ತಿಳಿದುಬರಲಿದೆಯೆಂದು ಅವರು ಹೇಳಿದ್ದಾರೆ.ಮಹಿಳೆಯು ಗುರುವಾರ ಮಲವಿಸರ್ಜನೆಗಾಗಿ ಹೊರಹೋಗಿದ್ದಾಳೆನ್ನಲಾಗಿದೆ. ರಾತ್ರಿ ಯಾದರೂ ಆಕೆ ಹಿಂತಿರುಗದೆ ಇದ್ದಾಗ, ಆಕೆಗಾಗಿ ಬಂಧುಗಳು, ಗ್ರಾಮಸ್ಥರು ಶೋಧಕಾರ್ಯದಲ್ಲಿ ತೊಡಗಿದರು. ಆನಂತರ ಆಕೆಯ ಮೃತದೇಹ ಹೊಲವೊಂದರಲ್ಲಿ ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News