ಜಾಗತಿಕ ಉಗ್ರ ಗುಂಪುಗಳ 460 ಕೋಟಿ ರೂ. ಮುಟ್ಟುಗೋಲು ಹಾಕಿದ ಅಮೆರಿಕ

Update: 2021-01-01 15:29 GMT

ವಾಶಿಂಗ್ಟನ್, ಜ. 1: ಅಮೆರಿಕವು ವಿದೇಶಿ ಭಯೋತ್ಪಾದಕ ಸಂಘಟನೆಗಳ ನಿಗ್ರಹ ಕಾರ್ಯಾಚರಣೆಯ ಭಾಗವಾಗಿ, 2019ರಲ್ಲಿ ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳು ಸೇರಿದಂತೆ ಘೋಷಿತ ಜಾಗತಿಕ ಭಯೋತ್ಪಾದಕ ಗುಂಪುಗಳ 63 ಮಿಲಿಯ ಡಾಲರ್ (ಸುಮಾರು 460 ಕೋಟಿ ರೂಪಾಯಿ) ಹಣವನ್ನು ಮುಟ್ಟುಗೋಲು ಹಾಕಿದೆ ಎಂದು ಅಮೆರಿಕದ ಹಣಕಾಸು ಇಲಾಖೆಯ ವಾರ್ಷಿಕ ವರದಿಯೊಂದು ತಿಳಿಸಿದೆ.

ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳಾದ ಲಷ್ಕರೆ ತಯ್ಯಬದ 3.42 ಲಕ್ಷ ಪೌಂಡ್ (ಸುಮಾರು 2.5 ಕೋಟಿ ರೂಪಾಯಿ), ಜೈಶೆ ಮುಹಮ್ಮದ್‌ನ 1,725 ಡಾಲರ್ (ಸುಮಾರು 1.26 ಲಕ್ಷ ರೂಪಾಯಿ) ಮತ್ತು ಹರ್ಕತುಲ್ ಮುಜಾಹಿದೀನ್ ಅಲ್-ಇಸ್ಲಾಮಿಯ 45,798 ಡಾಲರ್ (ಸುಮಾರು 33.46 ಲಕ್ಷ ರೂಪಾಯಿ) ಹಣವನ್ನು ತಡೆಹಿಡಿಯಲಾಗಿದೆ ಎಂದು ಹಣಕಾಸು ಇಲಾಖೆಯು ಗುರುವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

ಪಾಕಿಸ್ತಾನದಲ್ಲಿ ನೆಲೆಸಿರುವ ಕಾಶ್ಮೀರ ಕೇಂದ್ರಿತ ಇನ್ನೊಂದು ಭಯೋತ್ಪಾದಕ ಗುಂಪು ಹಿಝ್ಬುಲ್ ಮುಜಾಹಿದೀನ್‌ಗೆ ಸೇರಿದ 4,321 ಡಾಲರ್ (ಸುಮಾರು 3.15 ಲಕ್ಷ ರೂಪಾಯಿ) ಹಣವನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News