ಎರಡನೇ ಟೆಸ್ಟ್: ಶತಕ ವಂಚಿತ ಅಝರ್ ಅಲಿ

Update: 2021-01-04 04:57 GMT

ಕ್ರೈಸ್ಟ್‌ಚರ್ಚ್, ಜ.3: ಇಲ್ಲಿ ಆರಂಭಗೊಂಡ ನ್ಯೂಝಿಲ್ಯಾಂಡ್ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನ ಪ್ರವಾಸಿ ಪಾಕಿಸ್ತಾನ ತಂಡವು ಮೊದಲ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತ ದಾಖಲಿಸಿದೆ.

  ವೇಗಿ ಕೈಲ್ ಜಾಮಿಸನ್ (69 ಕ್ಕೆ 5) ದಾಳಿಗೆ ಸಿಲುಕಿದ ಪಾಕಿಸ್ತಾನ ತಂಡವು 297 ರನ್‌ಗಳಿಗೆ ಆಲೌಟಾಗಿದೆ.

 ಈಗಾಗಲೇ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ನ್ಯೂಝಿಲ್ಯಾಂಡ್ ತಂಡ ಮೊದಲ ಬಾರಿ ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಲು ಎರಡನೇ ಟೆಸ್ಟ್‌ನಲ್ಲಿ ಗೆಲುವಿನ ಪ್ರಯತ್ನ ನಡೆಸಲಿದೆ.

    ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನ ತಂಡ ನ್ಯೂಝಿಲ್ಯಾಂಡ್‌ಗೆ ತಿರುಗೇಟು ನೀಡುವ ಪ್ರಯತ್ನದಲ್ಲಿದೆ. ಆರಂಭಿಕ ಬ್ಯಾಟ್ಸ್‌ಮನ್ ಶಾನ್ ಮಸೂದ್ (0), ಅಬಿದ್ ಅಲಿ(25) ಮತ್ತು ಹಾರಿಸ್ ಸೊಯೈಲ್(1) ಮತ್ತು ಫವಾದ್ ಅಲಿ(2) ಅವರನ್ನು ಪಾಕಿಸ್ತಾನ ಬೇಗನೆ ಕಳೆದುಕೊಂಡಿತು. ಈ ಹಂತದಲ್ಲಿ ಅಝರ್ ಅಲಿ (93) ತಂಡವನ್ನು ಆಧರಿಸಿದರು. ಅಝರ್ ಅಲಿ ಮತ್ತು ನಾಯಕ ಮುಹಮ್ಮದ್ ರಿಝ್ವಾನ್ 87 ರನ್‌ಗಳ ಜೊತೆಯಾಟ ನೀಡಿದರು. ರಿಝ್ವಾನ್ 61 ರನ್ , ಫಹೀಮ್ ಅಶ್ರಫ್ 48 ರನ್ ಮತ್ತು ಝಾಪರ್ ಗೋಹರ್ 34 ರನ್ ಗಳಿಸಿದರು.

ಜಾಮೀಸನ್ 69ಕ್ಕೆ 5 ವಿಕೆಟ್ , ಟಿಮ್ ಸೌಥಿ (61ಕ್ಕೆ 2), ಟ್ರೆಂಟ್ ಬೌಲ್ಟ್(82ಕ್ಕೆ 2) ತಲಾ 2 ವಿಕೆಟ್ ಮತ್ತು ಗಾಯಗೊಂಡ ನೀಲ್ ವ್ಯಾಗ್ನರ್ ಬದಲಿಗೆ ತಂಡವನ್ನು ಸೇರಿಕೊಂಡ ಸೀಮರ್ ಮ್ಯಾಟ್ ಹೆನ್ರಿ, 68ಕ್ಕೆ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್ ವಿವರ

ಪಾಕಿಸ್ತಾನ ಮೊದಲ ಇನಿಂಗ್ಸ್ 83.5 ಓವರ್‌ಗಳಲ್ಲಿ ಆಲೌಟ್ 297( ಅಬಿದ್ ಅಲಿ 93, ರಿಝ್ವ್‌ನ್ 61, ಅಶ್ರಫ್ 48; ಜಾಮೀಸನ್ 69ಕ್ಕೆ 5) 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News