ಪತಿಯನ್ನು ಇರಿದು ಕೊಂದು ಫೇಸ್ ಬುಕ್‌ ನಲ್ಲಿ ಪೋಸ್ಟ್‌ ಮಾಡಿದ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ!

Update: 2021-01-04 12:24 GMT

ಹೊಸದಿಲ್ಲಿ : ಮೂವತ್ತಾರು ವರ್ಷದ ಮಹಿಳೆಯೊಬ್ಬಳು ತನ್ನ  ಪತಿಯನ್ನು ಇರಿದು ಹತ್ಯೆಗೈದು ಈ ಮಾಹಿತಿಯನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದೇ ಅಲ್ಲದೆ ನಂತರ  ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಕ್ಷಿಣ ದಿಲ್ಲಿಯ ಛತರ್ಪುರ್ ಪ್ರದೇಶದ ಬಾಡಿಗೆ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ.

ಮಹಿಳೆಯ ಫೇಸ್ ಬುಕ್ ಪೋಸ್ಟ್ ನೋಡಿದ ನೆರೆಮನೆಯವರೊಬ್ಬರು ಹಾಗೂ ಬಾಡಿಗೆದಾರರು ಬಾಗಿಲು ತೆರೆಯದೇ ಇರುವುದನ್ನು ಗಮನಿಸಿ ಮನೆ ಮಾಲಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ  ಆಗಮಿಸಿ ಬಾಗಿಲು ಒಡೆದು ಒಳಕ್ಕೆ ಪ್ರವೇಶಿಸಿದಾಗ ನೆಲ ಹಾಗೂ  ಗೋಡೆಯಲ್ಲೆಲ್ಲಾ ರಕ್ತದ ಕಲೆಗಳು ಕಂಡು ಬಂದವು.

ಮಹಿಳೆಯ 37 ವರ್ಷದ ಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ ಮಹಿಳೆ ಆತನ ದೇಹದ ಪಕ್ಕದ ಹಾಸಿಗೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಆಕೆಯನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯ ಪ್ರದೇಶ ಮೂಲದ ಮಹಿಳೆಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಆಕೆಯ ಹೇಳಿಕೆಯನ್ನು ಪೊಲೀಸರು ಇನ್ನಷ್ಟೇ ದಾಖಲಿಸಿಕೊಳ್ಳಬೇಕಿದೆ.

 ದಂಪತಿ ಇದೇ ಮನೆಯಲ್ಲಿ 2013ರಿಂದ ವಾಸವಿದ್ದು ಇಬ್ಬರೂ ಒಂದೇ ವಿಮಾ ಕಂಪೆನಿಯಲ್ಲಿ ಬೇರೆ ಬೇರೆ ಹುದ್ದೆಯಲ್ಲಿದ್ದರು. ದಂಪತಿಗೆ ಮಕ್ಕಳಿಲ್ಲ. ಯಾವುದೋ  ವಿಚಾರಕ್ಕೆ ಮನಸ್ತಾಪವುಂಟಾಗಿ ಈ ಘಟನೆ ನಡೆದಿರಬೇಕೆಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News