ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಯಿಂದ ರಾಹುಲ್ ಔಟ್

Update: 2021-01-05 05:21 GMT

ಹೊಸದಿಲ್ಲಿ: ಸಿಡ್ನಿಯಲ್ಲಿ ಆಸ್ಟ್ರೇಲಿಯ ವಿರುದ್ದ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲು ಕೆಲವೇ ದಿನಗಳು  ಇರುವಾಗ ಭಾರತವು ಮತ್ತೊಮ್ಮೆ ಹಿನ್ನಡೆ ಅನುಭವಿಸಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಸಂಭಾವ್ಯ 11 ಆಟಗಾರರ ಬಳಗದಲ್ಲಿದ್ದ ಕೆ.ಎಲ್.ರಾಹುಲ್ ನಾಲ್ಕು ಪಂದ್ಯಗಳ ಸರಣಿಯ ಉಳಿದೆರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಶನಿವಾರ ಎಂಸಿಜಿಯಲ್ಲಿ ನಡೆದಿದ್ದ ಟೀಮ್ ಇಂಡಿಯಾದ ತಂಡದ ಅಭ್ಯಾಸದ ವೇಳೇ ಕೆಎಲ್  ರಾಹುಲ್ ಅವರ ಎಡಗೈ ಮಣಿಕಟ್ಟಿಗೆ ಗಾಯವಾಗಿತ್ತು. ಸಂಪೂರ್ಣ ಚೇತರಿಸಿಕೊಂಡು ಪೂರ್ಣ ಫಿಟ್ನೆಸ್ ಪಡೆಯಲು ಮೂರು ವಾರಗಳ ಅಗತ್ಯವಿದೆ. ಹೀಗಾಗಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಬಾರ್ಡರ್-ಗವಾಸ್ಕರ್ ಟ್ರೋಫಿಯ ಉಳಿದೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಮಂಗಳವಾರ ಪ್ರಕಟನೆಯೊಂದರಲ್ಲಿ ತಿಳಿಸಿದೆ. 
ರಾಹುಲ್ ಈ ಗ ನಡೆಯುತ್ತಿರುವ ಟೆಸ್ಸ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಡಿಲ್ಲ. ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಅಗತ್ಯವಿರುವ ಚೇತರಿಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ವಾಪಸಾಗಲಿದ್ದಾರೆ.  ರಾಹುಲ್ ವೃತ್ತಿಜೀವನದಲ್ಲಿ ಈ ತನಕ 36 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 5 ಶತಕ ಹಾಗೂ 11 ಅರ್ಧಶತಕಗಳನ್ನು ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News