ವರ್ತಮಾನ ಮತ್ತು ಕಾವ್ಯ

Update: 2021-01-05 10:55 GMT

ಕವಿ, ವಿಮರ್ಶಕ, ರಂಗ ನಿರ್ದೇಶಕರಾಗಿರುವ ವಸಂತ ಬನ್ನಾಡಿ ಅವರು ಮೂಲತಃ ಉಡುಪಿಯ ಕುಂದಾಪುರದವರು. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯನ್ನು ವಿರೋಧಿಸಿ, ವಸಂತ ಬನ್ನಾಡಿ ಅವರು ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿಯನ್ನು ಹಿಂದಿರುಗಿಸುವ ಮೂಲಕ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಕುಂದಾಪುರದ ಭಂಡಾರ್ಕರ್ ಕಾಲೇಜಿನಲ್ಲಿ ವಾಣಿಜ್ಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಫ್ಯಾಶಿಸ್ಟ್ ಪ್ರಭುತ್ವಗಳು ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿ ಅಸ್ತಿತ್ವಕ್ಕೆ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಕವಿಯಾದವನು ಯಾವ ನಿಲುವನ್ನು ತೆಗೆದುಕೊಳ್ಳಬೇಕು? ತನಗೂ ತನ್ನ ಸುತ್ತಲಿನ ಪ್ರಪಂಚದಲ್ಲಿ ಸಂಭವಿಸುತ್ತಿರುವ ಘಟನೆಗಳಿಗೂ ಸಂಬಂಧವೇ ಇಲ್ಲ ಎಂಬಂತೆ ಇದ್ದುಬಿಡಬೇಕೆ? ಅಥವಾ ತನ್ನ ಕಾವ್ಯದ ಮೂಲಕ ಸದ್ಯದ ವಾಸ್ತವಕ್ಕೆ ಪ್ರತಿಕ್ರಿಯಿಸಬೇಕೆ? ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕು? ಆತ ಆರಿಸಿಕೊಳ್ಳಬೇಕಾದ ವಸ್ತುವಿನ ಸ್ವರೂಪ ಹೇಗಿರಬೇಕು? ಅದು ಭಾಷಾ ಮಾಧ್ಯಮದ ಮೂಲಕ ಹೇಗೆ ಅಭಿವ್ಯಕ್ತಿ ಪಡೆಯಬೇಕು? ಇವುಗಳು ಕವಿಯಾದವನು ಇಂದಿನ ಸಂದರ್ಭದಲ್ಲಿ ತುರ್ತಾಗಿ ಕೇಳಿಕೊಳ್ಳಬೇಕಾದ ಪ್ರಶ್ನೆಗಳು.

‘‘ನೀವು ಕೇಳುತ್ತೀರಿ:

ಅವನ ಕವಿತೆ ಏಕೆ ಮಾತನಾಡುತ್ತಿಲ್ಲ

ಕನಸುಗಳ ಬಗ್ಗೆ ಎಲೆಗಳ ಬಗ್ಗೆ

ಮತ್ತು ಅವನ ನಾಡಿನ ಮಹಾ ಅಗ್ನಿಪರ್ವತಗಳ ಬಗ್ಗೆ

ಬಂದು ನೋಡಿ

ಬೀದಿಯ ಮೇಲೆ ರಕ್ತವಿದೆ

ಬಂದು ನೋಡಿ

ಬೀದಿಯ ಮೇಲೆ ರಕ್ತವಿದೆ

ಬಂದು ನೋಡಿ

ಬೀದಿಯ ಮೇಲೆ ರಕ್ತವಿದೆ’’

ಬಹಳಷ್ಟು ಮಂದಿ ಹಲವು ಸಂದರ್ಭಗಳಲ್ಲಿ ಉದ್ಧರಿಸುತ್ತಲೇ ಬಂದಿರುವ ಚಿಲಿಯ ಕವಿ ಪ್ಯಾಬ್ಲೋ ನೆರುಡಾನ ‘ಒಂದಿಷ್ಟು ವಿವರಣೆ ನೀಡುತ್ತಿದ್ದೇನೆ’ ಎಂಬ ಕವಿತೆಯ ಕೊನೆಯ ಸಾಲುಗಳು ಇವು.

ಫ್ಯಾಶಿಸಂ ಬಲವಾಗಿ ಬೆಳೆಯುತ್ತಿರುವಾಗಲೂ ಜನರನ್ನು ನಡುರಸ್ತೆಯಲ್ಲಿ ಬೂಟುಗಳಲ್ಲಿ ತುಳಿದು ಹತ್ತಿಕ್ಕುತ್ತಿರುವಾಗಲೂ ಕಗ್ಗೊಲೆಗೈಯುತ್ತಿರುವಾಗಲೂ ತಮ್ಮ ಪಾಡಿಗೆ ತಾವಿದ್ದುಕೊಂಡು ಹೂವು, ಹಣ್ಣು, ಎಲೆಗಳ ಬಗ್ಗೆ ಬರೆಯುವ ಕವಿಗಳ ಕುರಿತು ನೆರುಡಾ ಮಾಡಿರುವ ವ್ಯಾಖ್ಯಾನವಿದು. ಸ್ಪೇನ್‌ನ ಚುನಾಯಿತ ಸಮಾಜವಾದಿ ಸರಕಾರವನ್ನು ಮಿಲಿಟರಿ ದಂಡನಾಯಕ ಫ್ರಾಂಕೋ ವಜಾಗೊಳಿಸಿದ ಬಗ್ಗೆ ಮತ್ತು ದಂಗೆ ಎದ್ದ ಜನರನ್ನು ಆತ ಸೈನಿಕರ ಮೂಲಕ ಕ್ರೂರವಾಗಿ ಬಗ್ಗುಬಡಿದ ಬಗ್ಗೆ ಈ ಕವಿತೆಯಲ್ಲಿ ನೆರುಡಾ ಮಾತನಾಡುತ್ತಿದ್ದಾನೆ.

ಜಗತ್ತಿನ ಎಲ್ಲ ಫ್ಯಾಶಿಸ್ಟ್ ಸರಕಾರಗಳೂ ಜನರನ್ನು ಹತ್ತಿಕ್ಕಿದ್ದು ಹೀಗೆಯೇ. ಅದು ಈಗಲೂ ನಿಂತಿಲ್ಲ. ಫ್ಯಾಶಿಸ್ಟ್ ಪ್ರಭುತ್ವಗಳು ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿ ಅಸ್ತಿತ್ವಕ್ಕೆ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಕವಿಯಾದವನು ಯಾವ ನಿಲುವನ್ನು ತೆಗೆದುಕೊಳ್ಳಬೇಕು? ತನಗೂ ತನ್ನ ಸುತ್ತಲಿನ ಪ್ರಪಂಚದಲ್ಲಿ ಸಂಭವಿಸುತ್ತಿರುವ ಘಟನೆಗಳಿಗೂ ಸಂಬಂಧವೇ ಇಲ್ಲ ಎಂಬಂತೆ ಇದ್ದುಬಿಡಬೇಕೆ? ಅಥವಾ ತನ್ನ ಕಾವ್ಯದ ಮೂಲಕ ಸದ್ಯದ ವಾಸ್ತವಕ್ಕೆ ಪ್ರತಿಕ್ರಿಯಿಸಬೇಕೆ? ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕು?

ಆತ ಆರಿಸಿಕೊಳ್ಳಬೇಕಾದ ವಸ್ತುವಿನ ಸ್ವರೂಪ ಹೇಗಿರಬೇಕು?

ಅದು ಭಾಷಾ ಮಾಧ್ಯಮದ ಮೂಲಕ ಹೇಗೆ ಅಭಿವ್ಯಕ್ತಿ ಪಡೆಯಬೇಕು?

 ಇವುಗಳು ಕವಿಯಾದವನು ಇಂದಿನ ಸಂದರ್ಭದಲ್ಲಿ ತುರ್ತಾಗಿ ಕೇಳಿಕೊಳ್ಳಬೇಕಾದ ಪ್ರಶ್ನೆಗಳು.

ಈಚಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿಯೂ ಫ್ಯಾಶಿಸಂ ಸ್ಪಷ್ಟ ರೂಪವನ್ನು ಪಡೆದುಕೊಳ್ಳುತ್ತಿದೆ. ದ್ವೇಷ ರಾಜಕೀಯ ಹೆಚ್ಚುತ್ತಿದೆ. ಗುಂಪು ಹತ್ಯೆಯ ಮತ್ತು ಅಸಹಾಯಕರ ಮೇಲಿನ ಕ್ರೂರ ಹಲ್ಲೆಯ ರೂಪದಲ್ಲಿ ಪ್ರಕಟಗೊಳ್ಳುತ್ತಿದೆ. ಇದಕ್ಕೆ ಪ್ರತಿಯಾಗಿ ಪ್ರತಿರೋಧದ ಧ್ವನಿಗಳೂ ಕೇಳಿಬರುತ್ತಿವೆ.

‘ದ್ವೇಷ ರಾಜಕೀಯದ ವಿರುದ್ಧ ಮತ್ತು ಸಮಾನ ಹಾಗೂ ಬಹುತ್ವ ಭಾರತಕ್ಕಾಗಿ ನಾವು ಧ್ವನಿ ಎತ್ತೋಣ’ಎಂಬ ಹೇಳಿಕೆಯನ್ನು ದೇಶದ ಎಲ್ಲಾ ಭಾಷೆಯ ಇನ್ನೂರಕ್ಕೂ ಹೆಚ್ಚು ಬರಹಗಾರರು ಮತ್ತು ಕಲಾವಿದರು ಈಚೆಗೆ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇಂದಿನ ಸಂದರ್ಭದಲ್ಲಿ ಕವಿಯಾದವನು ಮಾಡಬೇಕಾದ್ದು ಈ ಕೆಲಸವನ್ನೇ. ಜರ್ಮನಿಯ ಸಮಾಜವಾದಿ ಕವಿ ಬ್ರೆಕ್ಟ್ ಹೇಳಿದ್ದೂ ಇದನ್ನೇ. ‘‘ಕವಿತೆ ವ್ಯಾವಹಾರಿಕವಾಗಿರಬೇಕು. ಪ್ರಯೋಜನಕಾರಿಯಾಗಿರಬೇಕು. ಮಹತ್ವದ ಕವಿತೆಗಳಿಗೆಲ್ಲ ದಾಖಲೆಯಾಗಿ ಬೆಲೆಯಿರುತ್ತದೆ. ಕವಿ ಒಬ್ಬ ಮನುಷ್ಯ ವಿಶೇಷ. ಅವನು ತನಗೆ ತಾನು ಹೇಗೆ ಅಭಿವ್ಯಕ್ತಿ ಕೊಟ್ಟನೆಂಬುದನ್ನು ಅವನ ಕೃತಿ ತೋರಿಸಬೇಕು’’ಎಂದು ಬ್ರೆಕ್ಟ್ ಹೇಳುತ್ತಾನೆ. ಅತ್ಯಂತ ಮುಖ್ಯವಾದ ಮಾತುಗಳು ಇವು. ಆದರೆ ಈ ಮಾತುಗಳನ್ನು ಗಮನಿಸಲು ಕನ್ನಡದ ಹೆಚ್ಚಿನ ಕವಿಗಳು ಇಂದಿಗೂ ತಯಾರಿಲ್ಲ. ಅವರು ತಮ್ಮ ಉದ್ಧಾರದ ಬಗ್ಗೆ ಮಾತ್ರ ಚಿಂತಿತರಾಗಿರುವಂತೆ ತೋರುತ್ತಿದೆ. ತಮಗೆ ಸಿಗುವ ಸವಲತ್ತು ಮತ್ತು ಪ್ರಶಸ್ತಿಗಳ ಮೇಲೆ ಮಾತ್ರ ಅವರ ಕಣ್ಣು ನೆಟ್ಟಿದೆ. ಮಾತ್ರವಲ್ಲ, ಯುವಪೀಳಿಗೆಯ ಬರಹಗಾರರಲ್ಲಿ ದಾರಿತಪ್ಪಿಸುವ ಆಲೋಚನಾ ಕ್ರಮಗಳನ್ನು ಬಿತ್ತುವುದರಲ್ಲಿ ಉತ್ಸುಕರಾಗಿರುವವರ ಹಾಗೆ ಕಾಣಿಸುತ್ತಿದ್ದಾರೆ. ಅವರ ಪ್ರಕಾರ ಎಲ್ಲವೂ ಸರಿಯಾಗಿಯೇ ಇದೆ. ಇವತ್ತಿಗೂ ಅವರ ಕಾವ್ಯದ ವಸ್ತು ಕೃಷ್ಣ ರಾಧೆಯರ ಸಲ್ಲಾಪದ ಬಗ್ಗೆ ಇರುತ್ತದೆ. ‘ಶ್ರೀರಾಮನವಮಿಯ ದಿವಸ’ದಲ್ಲಿ ಕಾಣುವ ಪುರುಷೋತ್ತಮ ರಾಮನ ವಿಜೃಂಭಣೆ ಬಗ್ಗೆಯಷ್ಟೇ ಅವರ ಗಮನ. ಬುದ್ಧನ ಬಗ್ಗೆ ಮಾತನಾಡುವಾಗಲೂ ತನ್ನ ಅಂತರಂಗದಲ್ಲಿ ಇರುವುದು ರಾಮ, ಕೃಷ್ಣ, ಬುದ್ಧರ ಪ್ರತಿಮೆಗಳು ಎಂದು ಘಂಟಾಘೋಷವಾಗಿ ಹೇಳಲು ಅವರು ಹಿಂಜರಿಯುವುದಿಲ್ಲ. ಆ ಮೂಲಕ ವೇಗವಾಗಿ ಬೆಳೆಯುತ್ತಿರುವ ಹಿಂದುತ್ವವಾದಿ ರಾಜಕೀಯದ ಜೊತೆಗೆ ಒಂದು ಮೌನ ಸಂಧಾನದಲ್ಲಿ ತೊಡಗಿರುವವರಂತೆ ಕಾಣಿಸುತ್ತಿದ್ದಾರೆ. ಅತ್ಯಂತ ಖೇದಕರವಾದ ಸನ್ನಿವೇಶ ಇದು.

 ಇದಕ್ಕೆ ಒಂದು ಚಾರಿತ್ರಿಕ ಹಿನ್ನೆಲೆಯೂ ಇದೆ. ಕವಿಗಳು, ಅವರು ಯಾವುದೇ ದೇಶದವರಿರಬಹುದು, ಬೇರೆ ದೇಶದ ಕವಿಗಳಿಂದ, ಅವರು ಹಾಕಿಕೊಟ್ಟಿರುವ ದಾರಿಯಿಂದ ಪ್ರಭಾವಿತರಾಗಿರುತ್ತಾರೆ. ನಮ್ಮಲ್ಲಿ ನವೋದಯ ಕಾವ್ಯ ತನ್ನ ಮುಖ್ಯ ಪ್ರೇರಣೆಯನ್ನು ಪಡೆದುಕೊಂಡಿದ್ದು ಬಿ.ಎಂ.ಶ್ರೀ ಕನ್ನಡಕ್ಕೆ ತಂದ ‘ಇಂಗ್ಲಿಷ್ ಗೀತಗಳು’ ಎಂಬ ಕಾವ್ಯ ಸಂಕಲನದಿಂದ. ಕನ್ನಡದ ಮುಖ್ಯ ಕವಿಗಳು ತಮಗೆ ಹತ್ತಿರವೆನಿಸುವ ಕವಿಗಳ ಕಾವ್ಯದಿಂದ ಪ್ರೇರಣೆ ಪಡೆದದ್ದು ಇದೇ ಸಂದರ್ಭದಲ್ಲಿ. ಕುವೆಂಪು ವರ್ಡ್ಸವರ್ತ್‌ನಿಂದ ಪ್ರೇರಣೆಗೊಂಡಿದ್ದು, ಕೆ.ಎಸ್. ನರಸಿಂಹಸ್ವಾಮಿ ರಾಬರ್ಟ್ ಬರ್ನ್ಸ್‌ನಿಂದ ಪ್ರಭಾವಿತರಾಗಿದ್ದು ಇದಕ್ಕೆ ಉದಾಹರಣೆಗಳು. ಇಂತಹ ಪ್ರೇರಣೆಗಳು ಕನ್ನಡಕ್ಕೆ ಒಳ್ಳೆಯದನ್ನೇ ಮಾಡಿವೆ. ಮುಂದೆ ಕುವೆಂಪು ತನ್ನದೇ ಆದ ದಾರಿಯನ್ನು ಕಂಡುಕೊಂಡದ್ದು ಮತ್ತು ವಿಶ್ವ ಮಾನವ ಕಲ್ಪನೆಯನ್ನು ವ್ರತದಂತೆ ಬಿತ್ತರಿಸಿದ್ದು ಕವಿಯೊಬ್ಬ ಸಮಾಜಕ್ಕೆ ಹೇಗೆ ಸ್ಪಂದಿಸಬಲ್ಲ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.

ವರ್ತಮಾನ ಮತ್ತು ಕಾವ್ಯದ ಸಂಬಂಧ ಸಮಸ್ಯಾತ್ಮಕ ವಾದದ್ದು, ಕಗ್ಗಂಟಾಗಿ ಗೋಚರಿಸಿದ್ದು ನವ್ಯರ ಕಾಲದಲ್ಲಿ.

ಹತ್ತೊಂಭತ್ತನೆಯ ಶತಮಾನದ ಪೂರ್ವಾರ್ಧ ಜಗತ್ತು ಈ ವರೆಗೆ ಎಂದೂ ಕಂಡಿರದಿದ್ದ ತಳಮಳಕ್ಕೆ ಒಳಗಾಗಲು ಕಾರಣವಾದ ಕಾಲ. ಎರಡು ಮಹಾಯುದ್ಧಗಳು, ಹಿಟ್ಲರನ ನಾಝಿವಾದ, ಎಲ್ಲೆಲ್ಲೂ ತಲೆಯೆತ್ತಿದ ಸರ್ವಾಧಿಕಾರಿ ಪ್ರಭುತ್ವಗಳು ಒಟ್ಟಾರೆಯಾಗಿ ಜನಜೀವನದಲ್ಲಿ ಬಹುದೊಡ್ಡ ಪಲ್ಲಟಕ್ಕೆ ಕಾರಣವಾದವು. ಇದು ಕವಿಗಳು ತಮ್ಮ ವರ್ತಮಾನಕ್ಕೆ ತೀವ್ರವಾಗಿ ಸ್ಪಂದಿಸಿದ ಕಾಲವೂ ಹೌದು.

‘‘ಕವಿತೆ ವ್ಯಾವಹಾರಿಕವಾಗಿರಬೇಕು. ಪ್ರಯೋಜನಕಾರಿಯಾಗಿರಬೇಕು. ಮಹತ್ವದ ಕವಿತೆಗಳಿಗೆಲ್ಲ ದಾಖಲೆಯಾಗಿ ಬೆಲೆಯಿರುತ್ತದೆ. ಕವಿ ಒಬ್ಬ ಮನುಷ್ಯ ವಿಶೇಷ. ಅವನು ತನಗೆ ತಾನು ಹೇಗೆ ಅಭಿವ್ಯಕ್ತಿ ಕೊಟ್ಟನೆಂಬುದನ್ನು ಅವನ ಕೃತಿ ತೋರಿಸಬೇಕು’’ಎಂದು ಬ್ರೆಕ್ಟ್ ಹೇಳುತ್ತಾನೆ. ಅತ್ಯಂತ ಮುಖ್ಯವಾದ ಮಾತುಗಳು ಇವು. ಆದರೆ ಈ ಮಾತುಗಳನ್ನು ಗಮನಿಸಲು ಕನ್ನಡದ ಹೆಚ್ಚಿನ ಕವಿಗಳು ಇಂದಿಗೂ ತಯಾರಿಲ್ಲ. ಅವರು ತಮ್ಮ ಉದ್ಧಾರದ ಬಗ್ಗೆ ಮಾತ್ರ ಚಿಂತಿತರಾಗಿರುವಂತೆ ತೋರುತ್ತಿದೆ. ತಮಗೆ ಸಿಗುವ ಸವಲತ್ತು ಮತ್ತು ಪ್ರಶಸ್ತಿಗಳ ಮೇಲೆ ಮಾತ್ರ ಅವರ ಕಣ್ಣು ನೆಟ್ಟಿದೆ. ಮಾತ್ರವಲ್ಲ, ಯುವಪೀಳಿಗೆಯ ಬರಹಗಾರರಲ್ಲಿ ದಾರಿತಪ್ಪಿಸುವ ಆಲೋಚನಾ ಕ್ರಮಗಳನ್ನು ಬಿತ್ತುವುದರಲ್ಲಿ ಉತ್ಸುಕರಾಗಿರುವವರ ಹಾಗೆ ಕಾಣಿಸುತ್ತಿದ್ದಾರೆ. ಅವರ ಪ್ರಕಾರ ಎಲ್ಲವೂ ಸರಿಯಾಗಿಯೇ ಇದೆ. ಇವತ್ತಿಗೂ ಅವರ ಕಾವ್ಯದ ವಸ್ತು ಕೃಷ್ಣ ರಾಧೆಯರ ಸಲ್ಲಾಪದ ಬಗ್ಗೆ ಇರುತ್ತದೆ. ‘ಶ್ರೀರಾಮನವಮಿಯ ದಿವಸ’ದಲ್ಲಿ ಕಾಣುವ ಪುರುಷೋತ್ತಮ ರಾಮನ ವಿಜೃಂಭಣೆ ಬಗ್ಗೆಯಷ್ಟೇ ಅವರ ಗಮನ. ಬುದ್ಧನ ಬಗ್ಗೆ ಮಾತನಾಡುವಾಗಲೂ ತನ್ನ ಅಂತರಂಗದಲ್ಲಿ ಇರುವುದು ರಾಮ, ಕೃಷ್ಣ, ಬುದ್ಧರ ಪ್ರತಿಮೆಗಳು ಎಂದು ಘಂಟಾಘೋಷವಾಗಿ ಹೇಳಲು ಅವರು ಹಿಂಜರಿಯುವುದಿಲ್ಲ. ಆ ಮೂಲಕ ವೇಗವಾಗಿ ಬೆಳೆಯುತ್ತಿರುವ ಹಿಂದುತ್ವವಾದಿ ರಾಜಕೀಯದ ಜೊತೆಗೆ ಒಂದು ಮೌನ ಸಂಧಾನದಲ್ಲಿ ತೊಡಗಿರುವವರಂತೆ ಕಾಣಿಸುತ್ತಿದ್ದಾರೆ. ಅತ್ಯಂತ ಖೇದಕರವಾದ ಸನ್ನಿವೇಶ ಇದು.

‘ಕಾವ್ಯ ಮನುಷ್ಯನಿಗೆ ನೆರಳಿತ್ತು ಕಾಪಾಡುವ ವೃಕ್ಷ’ಎಂಬ ನಂಬಿಕೆ ಹೊಂದಿದ್ದ, ಮುಂದೆ ತನ್ನ ರಾಜಕೀಯ ಧೋರಣೆಯ ಕಾರಣದಿಂದ ಬಂಧನಕ್ಕೂ ಒಳಗಾದ ಅರಬ್ ಜಗತ್ತಿನ ಮುಖ್ಯ ಕವಿ ಅಲಿ ಅಹ್ಮದ್ ಸೈದ್; ‘ಕಾವ್ಯ ಜಗತ್ತನ್ನು ಬದಲಾಯಿಸಬಲ್ಲ ಒಂದು ಕ್ರಿಯೆ’ಎಂದು ನಂಬಿದ್ದ, ಲ್ಯಾಟಿನ್ ಅಮೆರಿಕದ ಕವಿ ಅಕ್ಟೇವಿಯಾ ಪಾಝ್; ‘ನನ್ನ ಕವಿತೆಗಳು ದೇಶದ ತಳಮಳಕ್ಕೆ ಸಾಕ್ಷಿಯಾಗಬೇಕು’ ಎಂದು ನುಡಿದ, ಹಿಂಸೆ ಮತ್ತು ದಮನಗಳ ಯುಗದ ಕವಿ ಸ್ಪೇನ್‌ನ ಏಂಜೆಲೋ ಗೋನ್ಸಾಲೆಜ್; ‘ದುಷ್ಟರೇ, ಭ್ರಷ್ಟರೇ, ನಾಶವಾಗುತ್ತೀರಿ ನೀವು’ ಎಂದು ವಾಚ್ಯವಾಗಿ ಹೇಳಲು ಬಯಸದ, ಪ್ರತಿಭಟನೆ ಮತ್ತು ಬಂಡುಕೋರತನ ವ್ಯಕ್ತಪಡಿಸಲು ತನ್ನದೇ ಪದಸಂಪತ್ತು ಬೆಳೆಸಿಕೊಂಡ, ನಾಝಿಗಳ ವಿರುದ್ಧ ಸತತವಾಗಿ ಹೋರಾಡಿದ ಪೊಲ್ಯಾಂಡಿನ ಹರ್ಬರ್ಟ್; ಯುದ್ಧದ ಅತಿರೇಕಗಳನ್ನು ದಾಖಲು ಮಾಡಿದ, ‘ಕವಿತೆಯನ್ನಲ್ಲ, ವಾಸ್ತವವನ್ನು ಸೃಷ್ಟಿಸುವುದು ತನ್ನ ಗುರಿ’ ಎಂದು ಹೇಳಿದ, ‘ಕಸಾಯಿ ಕತ್ತಿಯ ಅಲುಗಿನಿಂದ ತಪ್ಪಿಸಿಕೊಂಡು ಬಂದಿದ್ದೇನೆ’ ಎಂದು ಘೋಷಿಸಿದ, ಬದುಕಿನ ಮೇಲ್ಮೈಯಲ್ಲಿರುವ ಶೂನ್ಯ ಮತ್ತು ಅಂತರಂಗದಲ್ಲಿರುವ ಹಿಂಸೆಗಳನ್ನು ಗದ್ಯಕ್ಕೆ ಹತ್ತಿರವಾದ ಭಾಷೆಯಲ್ಲಿ ವ್ಯಕ್ತಪಡಿಸಿದ ಪೊಲ್ಯಾಂಡಿನ ರೋಸೋವಿಕ್ಸ್; ‘ನಾನು ರೊಟ್ಟಿ, ಸತ್ಯ, ಹೆಂಡ ಮತ್ತು ಕನಸುಗಳ ಕವಿ’ ಎಂದು ತನ್ನನ್ನು ತಾನು ಕರೆದುಕೊಂಡ, ಜಗತ್ತಿನ ಕಾವ್ಯಕ್ಕೆ ಹೊಸ ಕಲ್ಪನೆ ಮತ್ತು ಶೈಲಿಗಳನ್ನು ಒದಗಿಸಿಕೊಟ್ಟ, ಸರ್ವಾಧಿಕಾರಿ ಪಿನೋಶೆಟ್ ವಿರುದ್ಧ ಸೆಣಸುತ್ತಲೇ ತೀರಿಕೊಂಡ ಚಿಲಿಯ ಪಾಬ್ಲೋ ನೆರುಡಾ; ‘ಡೆತ್ ಫ್ಯೂಜ್’ ಕವಿತೆಯ ಮೂಲಕ ಹಿಟ್ಲರನ ಯಾತನಾ ಶಿಬಿರದ ಅನುಭವಗಳ ಚಿತ್ರಣ ನೀಡಿದ, ದಿಗ್ಭ್ರಮೆ ಹುಟ್ಟಿಸುವ ಪ್ರತಿಮೆಗಳನ್ನು ಕಟ್ಟಿಕೊಟ್ಟ ರೊಮಾನಿಯಾದ ಪಾಲ್ ಕ್ಲೀನ್; ‘ಸಾಮಾಜಿಕ ಶಕ್ತಿಗಳು ಮನುಷ್ಯ ಸ್ವಭಾವವನ್ನು ನಿರ್ಧರಿಸುತ್ತವೆ’ ಎಂದು ನಂಬಿದ್ದ, ‘ಬಂಡವಾಳಶಾಹಿಯ ಕೆಡುಕುಗಳು ಬಡವರನ್ನು ಪಶುಗಳನ್ನಾಗಿಯೂ ಶ್ರೀಮಂತರನ್ನು ಭ್ರಷ್ಟರನ್ನಾಗಿಯೂ ಪರಿವರ್ತಿಸುತ್ತವೆ’ ಎಂದು ಹೇಳಿದ, ಹಿಟ್ಲರನ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ದೇಶಾಂತರ ಹೋದ ಜರ್ಮನ್ ಕವಿ ಬರ್ಟೋಲ್ಟ್ ಬ್ರೆಕ್ಟ್ ; ದಾಖಲೆಗಳಿಲ್ಲದೆ ದೇಶಾಂತರ ಅಲೆದ,ಆ ಕಾರಣಕ್ಕಾಗಿಯೇ ಅಧಿಕಾರಿಗಳ ದೌರ್ಜನ್ಯಕ್ಕೆ ಸಿಲುಕಿದ, ತಾಯಿ ನೆಲಕ್ಕಾಗಿ ತೀವ್ರವಾಗಿ ಹಂಬಲಿಸಿದ, ಸೆರೆಮನೆ ವಾಸವನ್ನೂ ಅನುಭವಿಸಿದ ಫೆಲೆಸ್ತೀನ್ ಕವಿ ಮಹಮೂದ್ ದರ್ವೇಶ್; ದೇಶದ ವಿರುದ್ಧದ ಸಂಚಿನ ಪಾಲುಗಾರ ಎಂಬ ಸುಳ್ಳು ಆರೋಪದ ಮೇಲೆ ಸೆರೆಮನೆವಾಸ ಕಂಡ ಪಾಕಿಸ್ತಾನಿ ಕವಿ ಫೈಝ್ ಅಹ್ಮದ್ ಫೈಝ್; ಈ ಪಟ್ಟಿಯನ್ನು ಬೆಳೆಸುತ್ತಲೇ ಹೋಗಬಹುದು. ಅನ್ಯಾಯದ ವಿರುದ್ಧ ಸಡ್ಡು ಹೊಡೆದ ಧೀಮಂತ ಕವಿಗಳನ್ನು ಕಂಡ ಕಾಲ ಅದು. ಇನ್ನು ವರ್ಣಭೇದ ನೀತಿಯ ವಿರುದ್ಧ ಪ್ರತಿರೋಧ ತೋರಿ ವರ್ಷಾನುಗಟ್ಟಲೆ ಜೈಲುವಾಸ ಅನುಭವಿಸಿದ ಅಂತೋನಿಯೋ ಜೆಸಿಂತೋ, ಡೆನಿಸ್ ಬ್ರೂಟಸ್, ಬರ್ನಾಡ್ ದಾವೈ, ವೋಲೆ ಸೊಯಿಂಕಾ ಮುಂತಾದವರ ಒಂದು ದೊಡ್ಡ ಪಟ್ಟಿಯೇ ಇದೆ. ದಕ್ಷಿಣ ಆಫ್ರಿಕ, ಅಂಗೋಲ, ನೈಜೀರಿಯಕ್ಕೆ ಸೇರಿದ ಅಂತಹ ಪ್ರಮುಖ ಕವಿಗಳನ್ನು ನಾನು ಇಲ್ಲಿ ಹೆಸರಿಸಿಲ್ಲ.

 ಈ ಎಲ್ಲ ಕವಿಗಳ ವಿಸ್ತಾರವಾದ ಪರಿಚಯ ಕನ್ನಡಕ್ಕೆ ಅತ್ಯವಶ್ಯಕವಾದುದು. ಕನ್ನಡದಲ್ಲಿ ಈ ಕೆಲಸವನ್ನು ಅನೇಕರು ಸಮರ್ಪಕವಾಗಿ ಮಾಡಿದ್ದಾರೆ ಕೂಡ. ಓ.ಎಲ್. ನಾಗಭೂಷಣಸ್ವಾಮಿ ಅವರ ‘ಕನ್ನಡಕ್ಕೆ ಬಂದ ಕವಿತೆ’, ಎಚ್.ಎಸ್. ರಾಘವೇಂದ್ರರಾವ್ ಅವರ ‘ಕಪ್ಪು ಕವಿತೆ’, ಎಚ್.ಎಸ್. ಶಿವಪ್ರಕಾಶ್ ಅವರ ‘ಮರುರೂಪಗಳು’, ಎಂ. ಆರ್. ಕಮಲ ಅವರ ‘ನೆತ್ತರಲಿ ನೆಂದ ಚಂದ್ರ’, ಶಾ.ಬಾಲೂರಾವ್ ಅವರ ‘ಬರ್ಟೋಲ್ಟ್ ಬ್ರೆಕ್ಟ್ ಕವಿತೆಗಳು’ ಇದಕ್ಕೆ ಅತ್ಯುತ್ತಮ ಉದಾರಣೆಗಳು. ಈ ನಿಟ್ಟಿನಲ್ಲಿ ಇನ್ನಷ್ಟು ಕೆಲಸ ಆಗಬೇಕಾಗಿದೆ. ಏಕೆಂದರೆ ಕವಿಯ ಸಾಮಾಜಿಕ ಜವಾಬ್ದಾರಿ ಏನು ಎಂದು ತಿಳಿದುಕೊಳ್ಳಲು ಈ ಸಂಕಲನಗಳಲ್ಲಿ ಹೆಸರಿಸಿದ ಕವಿಗಳ ಕೂಲಂಕಷ ಅಭ್ಯಾಸ ನಡೆಯಬೇಕಾಗಿದೆ. ನಿಜವಾದ ಅರ್ಥದಲ್ಲಿ ಕತ್ತಿಯ ಅಲಗಿನ ಮೇಲೆ ನಡೆದ ಕವಿಗಳು ಇವರು. ಸಾಮಾಜಿಕ ಮತ್ತು ರಾಜಕೀಯ ವಸ್ತುವನ್ನು ಕವಿತೆಯಾಗಿಸಿದರೆ ಕವಿತೆ ಮಲಿನವಾಗುತ್ತದೆ ಎಂದು ಅವರು ಯಾವತ್ತೂ ಯೋಚಿಸಿದವರಲ್ಲ. ಹಾಗಂತ ಹೊಸ ಕಾವ್ಯ ಭಾಷೆಯ ಹುಡುಕಾಟವನ್ನು ನಿಲ್ಲಿಸಿದವರೂ ಅಲ್ಲ. ಪ್ರತಿಭಟನೆಯ ಕಾವ್ಯ ಗಟ್ಟಿ ಗಂಟಲಿನ ಕೂಗಾಟದಲ್ಲಿ ವ್ಯಕ್ತವಾಗಬೇಕು ಎಂಬುದರಲ್ಲೂ ಅವರಿಗೆ ನಂಬಿಕೆ ಇರಲಿಲ್ಲ. ಅಂತಿಮವಾಗಿ ಕಾವ್ಯ ಮಾನವೀಯ ಸಂಬಂಧಗಳನ್ನು ಶೋಧಿಸಬೇಕು ಎಂದೂ ಜಗತ್ತನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಬೇಕು ಎಂದೂ ಸುಖ, ನೆಮ್ಮದಿ ಮತ್ತು ಪ್ರೀತಿ ಅದರ ಅಂತಿಮ ತಾಣವಾಗಬೇಕು ಎಂದೂ ನಂಬಿ ಬರೆದವರು ಅವರು.

  ಮೇಲೆ ಕಾಣಿಸಿರುವ ಅನೇಕರು ಶ್ರೇಷ್ಠ ಸಮಾಜವಾದಿ ಕಾವ್ಯದ ಮಾದರಿಗಳನ್ನು ನೀಡಿದರು. ತಾವು ನಂಬಿಕೊಂಡ ಸಿದ್ಧಾಂತ, ಕಲಾತ್ಮಕತೆಗೆ ಧಕ್ಕೆ ಬಾರದಿರುವಂತೆ ನೋಡಿಕೊಂಡರು. ಸಿದ್ಧಾಂತವನ್ನು ಮೀರಿ ಕಾವ್ಯ ರಚಿಸಿದರು. ಇಂದು ನಾವು ಎದುರಿಸುತ್ತಿರುವ ಅನೇಕ ಸವಾಲುಗಳಿಗೆ ಈ ಕವಿಗಳ ಕಾವ್ಯದಲ್ಲಿ ಸೂಕ್ಷ್ಮವಾದ ಹೊಳಹುಗಳಿವೆ. ಫ್ಯಾಶಿಸಂ ಬೆಳೆಯುತ್ತಿರುವ ಸಂದರ್ಭದಲ್ಲಿ ಜನರು ಅದರ ಕಡೆಗೆ ಯಾಕೆ ಆಕರ್ಷಿತರಾಗುತ್ತಾರೆ? ಯಾಕೆ ಅವರು ಪ್ರಜ್ಞಾವಂತರ ಮಾತುಗಳಿಗೆ ಕಿವಿಗೊಡುವುದಿಲ್ಲ? ಅದಕ್ಕಾಗಿ ನಾವು ಜನಸಮೂಹವನ್ನು ದೂರುವುದು ಸರಿಯೇ? ಹಾಗಂತ ‘ಎದ್ದೇಳಿ,ಹೋರಾಡಿ’ ಎಂದು ಕರೆಕೊಡುವುದೂ ಕಾವ್ಯದ ಕೆಲಸವಲ್ಲ. ಅತ್ಯಂತ ಸಂದಿಗ್ಧವಾದ ಪ್ರಶ್ನೆ ಇದು. ‘ಏನೋ ಕೊಳಚೆಯಲ್ಲಿ ಮಿಸುಕಾಡದೆ ಅಡಗಿ ಕುಳಿತಿದೆ. ಏನಿದೆ ಆ ಕೊಳಚೆಯಲ್ಲಿ? ಅದು ಜನರು. ನಿಜಕ್ಕೂ ಜನರೇ’ ಎನ್ನುವ ಬ್ರೆಕ್ಟ್‌ನ ಒಂದು ಪದ್ಯ ಇದೆ. ಈ ಸಾಲುಗಳು ವಾಸ್ತವ ಸ್ಥಿತಿಯನ್ನು ಬಿಂಬಿಸುತ್ತವೆ. ಹಾಗಂತ ಪರಿಸ್ಥಿತಿಯನ್ನು ಬದಲಿಸುವ ಜನರ ಧೀಶಕ್ತಿಯ ಬಗ್ಗೆ ಬ್ರೆಕ್ಟ್ ಎಂದೂ ಆಸೆಯನ್ನು ಕಳೆದುಕೊಳ್ಳಲಿಲ್ಲ. ಕಾವ್ಯದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವುದನ್ನೂ ಕೈಬಿಡಲಿಲ್ಲ. ಹೀಗೆ, ತನ್ನದೇ ಆದ ಕಾವ್ಯಭಾಷೆಯನ್ನು ರೂಪಿಸಿಕೊಳ್ಳುತ್ತಲೇ ಇರಬೇಕಾದ ಮತ್ತು ಸುತ್ತಲಿನ ಸಾಮಾಜಿಕ, ರಾಜಕೀಯ ಪರಿಸ್ಥಿತಿಗೆ ಪ್ರತಿಕ್ರಿಯಿಸುತ್ತಲೇ ಇರಬೇಕಾದ ಎಚ್ಚರವನ್ನು ಕವಿ ಹೊಂದಿರಬೇಕಾಗುತ್ತದೆ ಎಂಬುದರ ಕುರಿತ ಮೂಲಪಾಠ ಇಲ್ಲಿದೆ. ಪ್ರತಿಯೊಬ್ಬ ಕವಿಯೂ ತನ್ನ ಕಾವ್ಯ ಜೀವನದಲ್ಲಿ ಎದುರಿಸಲೇಬೇಕಾದ ಬಹು ದೊಡ್ಡ ಸವಾಲು ಇದು.

 ಮೇಲಿನ ಚರ್ಚೆಯ ಹಿನ್ನೆಲೆಯಲ್ಲಿ 1950ರ ನಂತರ ಕನ್ನಡದಲ್ಲಿ ಕಾಣಿಸಿಕೊಂಡ ಕಾವ್ಯ ಸಂಪ್ರದಾಯದ ಬಗ್ಗೆ ನನಗೆ ಇರುವ ತಕರಾರನ್ನು ನಾನಿಲ್ಲಿ ಹೇಳಲೇಬೇಕು. ಯಾಕೆ ನವ್ಯ ಕವಿಗಳಿಗೆ ಮೇಲಿನ ಯಾವ ಕವಿಯೂ ಮುಖ್ಯವಾಗಿ ಕಾಣಿಸಲಿಲ್ಲ? ಅವರು ಅನುಸರಿಸಿದ ಕಾವ್ಯ ಮಾರ್ಗದ ಬಗ್ಗೆ ಯಾಕೆ ಈ ಕವಿಗಳ ಗಮನ ಹರಿಯಲಿಲ್ಲ?

ಯಾಕೆ ನೆರುಡಾ, ಲೋರ್ಕಾ, ಬ್ರೆಕ್ಟ್, ಫೈಝ್, ದರ್ವೇಶ್ ಮುಂತಾದ ಯಾರನ್ನೂ ಅವರು ತಮ್ಮ ಮುಖ್ಯ ಪ್ರೇರಣೆಯಾಗಿ ಆರಿಸಿಕೊಳ್ಳಲಿಲ್ಲ? ಬದಲಾಗಿ ಯಾಕೆ ಎಜ್ರಾ ಪೌಂಡ್, ಟಿ.ಎಸ್. ಎಲಿಯಟ್ ಮುಂತಾದವರನ್ನು ಅನುಸರಿಸಿದರು ಮತ್ತು ಮುನ್ನೆಲೆಗೆ ತಂದರು? ಇಲ್ಲಿ ಒಂದು ಸೂಕ್ಷ್ಮತೆ ಇದೆ. ಮೇಲೆ ಕಾಣಿಸಿದ ಅನೇಕ ಕವಿಗಳು ಸಮಾಜವಾದಿಗಳಾಗಿದ್ದರು ಅಥವಾ ಸಮಾಜವಾದದಿಂದ ಪ್ರಭಾವಿತರಾಗಿದ್ದರು.

ಅಂದಿನ ಕಾಲಘಟ್ಟವೇ ಹಾಗಿತ್ತು. ವ್ಯಾಪಕವಾಗಿ ಹರಡಿದ್ದ ಹಿಂಸೆಯ ವಿರುದ್ಧ ಸಮಾಜವಾದಿಗಳಾಗಿರುವುದು ಅತ್ಯಂತ ಅನಿವಾರ್ಯವಾಗಿತ್ತು.

ಈ ಅಂಶವೇ ನವ್ಯ ಕವಿಗಳನ್ನು ಅವರಿಂದ ವಿಮುಖರನ್ನಾಗಿಸಿತೆ? ಹೌದು ಅನಿಸುತ್ತದೆ. ಗೋಪಾಲಕೃಷ್ಣ ಅಡಿಗರ ನೇತೃತ್ವದಲ್ಲಿ ನವ್ಯ ಕವಿಗಳು ವ್ಯಕ್ತಿವಾದದತ್ತ ಮುಖ ಮಾಡಿದ್ದರಲ್ಲಿ ಇದನ್ನು ಸ್ಪಷ್ಟವಾಗಿ ಗುರುತಿಸಬಹುದು.

ಇದರಿಂದ ಕನ್ನಡ ಕಾವ್ಯಕ್ಕೆ ಆದ ಹಾನಿ ಬಹಳ ದೊಡ್ಡದು. ಪ್ರತಿರೋಧದ ಶಕ್ತಿಯನ್ನು ತನ್ನೊಳಗೆ ಬೆಳೆಸಿಕೊಳ್ಳಬೇಕಾಗಿದ್ದ ಕಾವ್ಯ ಮಾದರಿ ಕನ್ನಡದಲ್ಲಿ ಕಾಣಿಸಿಕೊಳ್ಳದೆ ಹೋಯಿತು. ಅಂದಿನಿಂದ ತೊಡಗಿ ಇಂದಿನವರೆಗೂ ಕನ್ನಡ ಕಾವ್ಯ ಸನಾತನ ಮೌಲ್ಯಗಳ ಮುಖವಾಣಿಯಾಗಿದ್ದ ಎಂ.ಗೋಪಾಲಕೃಷ್ಣ ಅಡಿಗರನ್ನು ಮುಂಚೂಣಿಯಲ್ಲಿ ಇಟ್ಟುಕೊಂಡು ಕಾವ್ಯದ ಬಗ್ಗೆ ಯೋಚಿಸಿದ್ದು ಇದಕ್ಕೆ ಮುಖ್ಯ ಕಾರಣವಾಯಿತು. ಅಡಿಗರ ನಿರಂತರ ಆರಾಧನೆಯೇ ಮುಖ್ಯವಾಗಿ ಬಿಟ್ಟಿತು.

  ಇಂದೂ ಕೂಡ ಕನ್ನಡದ ಪ್ರತಿ ಮೂರರಲ್ಲಿ ಇಬ್ಬರು ಕವಿಗಳನ್ನು ಮಾತನಾಡಿಸಿ ನೋಡಿದರೆ ಈ ವಿಷಯ ಸ್ವಯಂವೇದ್ಯವಿದೆ. ಅಡಿಗರ ಹೆಸರನ್ನು ಹೇಳದೆ ಅವರು ಮಾತನ್ನು ಶುರು ಮಾಡುವುದೇ ಇಲ್ಲ. ಅಡಿಗರು ಕನ್ನಡದ ಮುಖ್ಯ ಕವಿ ಎಂದು ಹೇಳುವುದು ಬೇರೆ, ಅವರ ನಾಯಕತ್ವವನ್ನು ಒಪ್ಪಿಕೊಳ್ಳುವುದು ಬೇರೆ ಎಂಬುದು ಕನ್ನಡದ ಕವಿಗಳಿಗೆ ಹೊಳೆಯದೇ ಹೋಯಿತು. ಹೊಳೆದರೂ ಜಾಣಕುರುಡನ್ನು ಅವರು ಪ್ರದರ್ಶಿಸುತ್ತಾ ಬಂದರು ಅನಿಸುತ್ತದೆ. ಇಲ್ಲದಿದ್ದರೆ ಅಡಿಗರನ್ನು ಯಾವ ಕಾರಣಕ್ಕೂ ಬಿಟ್ಟುಕೊಡದ, ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವ ಕನ್ನಡದ ಕಮ್ಯುನಿಸ್ಟ್ ವಿಮರ್ಶಕರ ವರ್ತನೆಯನ್ನು ಹೇಗೆ ಅರ್ಥೈಸಬೇಕು?ಅಡಿಗರು ಮೊಳಗಿಸಿದ ‘ಪಾಂಚಜನ್ಯ’ ದಲ್ಲಿ ಅವರ ಧ್ವನಿ ಮಿಳಿತವಾಗಿಬಿಟ್ಟಿತು. ಕನ್ನಡ ಸಾಹಿತ್ಯಕ ವಾತಾವರಣವನ್ನು ಬಗ್ಗಡಗೊಳಿಸಿದ ಬೆಳವಣಿಗೆ ಇದು. ಅಡಿಗರ ಕಾವ್ಯದ ಬಗ್ಗೆ ಸಹಮತ ಹೊಂದಿರದ ಬರಹಗಾರರನ್ನು ಕಡೆಗಣ್ಣಲ್ಲಿ ನೋಡುವುದೂ ಮೂಲೆಗುಂಪು ಮಾಡುವುದೂ ನಡೆಯಿತು. ಇದರ ಒಟ್ಟಾರೆ ಪರಿಣಾಮವಾಗಿ ಕನ್ನಡ ಕಾವ್ಯ ಸಂಪೂರ್ಣವಾಗಿ ಸಾಮಾಜಿಕ ಎಚ್ಚರಕ್ಕೆ ಬೆನ್ನು ತಿರುಗಿಸಿ ನಿಲ್ಲುವಂತಾಯಿತು. ಪೌರಾಣಿಕ ಪ್ರತಿಮೆಗಳೇ ಕಾವ

Writer - ವಸಂತ ಬನ್ನಾಡಿ

contributor

Editor - ವಸಂತ ಬನ್ನಾಡಿ

contributor

Similar News