ಪಾಕಿಸ್ತಾನ ತಂಡವು ʼಶಾಲಾಮಟ್ಟದ ಕ್ರಿಕೆಟ್‌ʼ ಆಡುತ್ತಿದೆ: ಶುಐಬ್ ಅಖ್ತರ್‌ ಆಕ್ರೋಶ

Update: 2021-01-05 13:02 GMT

ಇಸ್ಲಾಮಾಬಾದ್,ಜ.05: ಕ್ರೈಸ್ಟ್ ಚರ್ಚ್‍ನ ಹೆಗ್ಲೆ ಓವಲ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಾಟದಲ್ಲಿ ಪಾಕ್ ತಂಡ 297ಗೆ ಆಲೌಟ್ ಆದ ನಂತರ ದೇಶದ ಕ್ರಿಕೆಟ್ ತಂಡದ ಮಾಜಿ ಫಾಸ್ಟ್ ಬೌಲರ್ ಶುಐಬ್ ಅಖ್ತರ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಈ ಕುರಿತು ಕಿರು ವೀಡಿಯೋವೊಂದನ್ನು ಟ್ವಿಟರ್‌ ನಲ್ಲಿ ಶೇರ್ ಮಾಡಿರುವ ಅವರು  ತಂಡಕ್ಕೆ ʼಸಾಧಾರಣʼ ಮಟ್ಟದ ಆಟಗಾರರನ್ನು ಸೇರಿಸಿದ ಪರಿಣಾಮ ಅವರು ಶಾಲಾ ಮಟ್ಟದಲ್ಲಿ ಆಡುವ ರೀತಿಯ ಕ್ರಿಕೆಟ್ ಆಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಕ್ಲಬ್ ಟೀಮ್‍ಗಳು ಇದಕ್ಕಿಂತ ಚೆನ್ನಾಗಿ ಆಟ ಆಡಬಲ್ಲವು ಎಂದೂ ಅಖ್ತರ್ ಹೇಳಿದ್ದಾರೆ.

"ಪಿಸಿಬಿಯ ನೀತಿಗಳು, ಅವರು ಸಾಧಾರಣ ಮಟ್ಟದ ಆಟಗಾರರನ್ನು ತರುತ್ತಾ ಇರುತ್ತಾರೆ ಹಾಗೂ  ಸಾಧಾರಣ ಮಟ್ಟದ ತಂಡಗಳನ್ನು ಕಟ್ಟುವುದರಿಂದ ಸಾಧಾರಣ  ಫಲಿತಾಂಶಗಳು ದೊರಕುತ್ತಿವೆ," ಎಂದು ಅಖ್ತರ್ ಟ್ವೀಟ್ ಮಾಡಿದ್ದಾರೆ.

"ಈಗ ಮಂಡಳಿ ಮತ್ತೆ ಆಡಳಿತದ ಬದಲಾವಣೆ ಕುರಿತು ಚಿಂತಿಸುತ್ತಿದೆ. ಸರಿ, ಆದರೆ ನೀವು ಯಾವಾಗ ಬದಲಾಗುತ್ತೀರಿ?" ಎಂದು ಅಖ್ತರ್ ಪಾಕ್ ಕ್ರಿಕೆಟ್ ಮಂಡಳಿಯನ್ನು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News